
ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾನಾ ನಗರಗಳಲ್ಲಿ ಬ್ಲಾಸ್ಟ್ ಮಾಡುವುದಾಗಿ ಇಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಎನ್ ಐ ಎ ಅಧಿಕಾರಿಗಳ ಮುಂಬೈ ಕಛೇರಿಗೆ ಬಂದಿರುವ ಇಮೇಲ್ ಪತ್ರದಲ್ಲಿ ಆತ ನನಗೆ 20ಕ್ಕೂ ಹೆಚ್ಚು ನಗರಗಳನ್ನ ಬ್ಲಾಸ್ಟ್ ಮಾಡುವಷ್ಟು ಆರ್ ಡಿಎಕ್ಸ್ ದೊರಕಿದೆ. ಮೋದಿ ನನ್ನ ಪರಮ ಶತ್ರು. ಆ ಬ್ಲಾಸ್ಟ್ ಜೊತೆಗೆ ಆದಷ್ಟು ಬೇಗ ಮೋದಿಯನ್ನೂ ಕೊಲ್ಲಬೇಕಿದೆ. ನಾನು ದಾಳಿ ಪ್ಲಾನ್ ಮಾಡಿದ್ದೇನೆ. ಫೆಬ್ರವರಿ 28ರಿಂದ ಸ್ಲೀಪರ್ ಸೆಲ್ ಗಳು ಕೆಲಸ ಶುರು ಮಾಡಿದ್ದಾರೆ. ಎಲ್ಲೆಲ್ಲಿ ಬಾಂಬ್ ಸ್ಟೋಟಿಸಬೇಕು ಎಂಬ ಪ್ಲಾನ್ ರೆಡಿಯಾಗಿದೆ. ತಾಖತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಇಮೇಲ್ ಮೂಲಕ ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಎನ್ ಐ ಎ ಅಧಿಕಾರಿಗಳು ತನಿಖೆ ಶುರು ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
