ಕವಿತೆ
ಕವಿತೆ
ಗೊತ್ತಿಲ್ಲದ ತಪ್ಪಿಗೆ..
ಸರಿ ಮಾಡಲಾಗದೆ..
ಅರ್ಥ ಅನರ್ಥಗಳ ತೆಕ್ಕೆಗೆ..
ರೆಕ್ಕೆ ಮುರಿದಂತಾಗಿದೆ ಹಕ್ಕಿಗೆ..
ಭಾವಗಳೇ ಅಸ್ವಸ್ತವಾಗಿವೆಯೋ?
ಮನಸೇ ಭ್ರಮೆಯಲ್ಲಿ ಸಿಲುಕಿದೆಯೋ?
ಎಂದೂ ಗೂಡಿಗೆ
ಮರಳದ ಹಕ್ಕಿಗೆ..
ಕನಸಿನ ಕರೆಯೋಲೆಯೇ?
ಆಕರ್ಷಣೆಯೇ ಆಗಿದ್ದರೆ..!
ದೂರದ ಆಗಸದಲಿ ಹಾರುವುದ ಕಂಡು
ಭಾರದ ನಗುವ ಬೀರಲಾಗುತ್ತಿತ್ತೆ..?
-ಬಸವರಾಜ್ ಜಿ ಎಸ್
basavakgl276@gmail.com

