ವಿದೇಶ

ರಷ್ಯಾದಲ್ಲಿ ವಿಮಾನ ನಾಪತ್ತೆ

ಮಾಸ್ಕೋ: ರಷ್ಯಾದ ಕಬರೋವಸ್ಕ್ ಪ್ರದೇಶದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದ ಆಂಟೊನೊವ್ -26 ವಿಮಾನ ನಾಪತ್ತೆಯಾಗಿದೆ.

ನಾಪತ್ತೆಯಾದ ವಿಮಾನವನ್ನು ಹುಡುಕಲು ಎಂಐ-8 ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿದೆ. ಕಬರೋವಸ್ಕ್ ನೈರುತ್ಯ ದಿಕ್ಕಿನಲ್ಲಿ 38 ಕಿ ಮೀ ದೂರವಿರುವ ರಾಡಾರ್ ಗಳಿಂದ ಆರು ಮಂದಿ ಪ್ರಯಾಣಿಸುತ್ತಿದ್ದ ಆನ್ 26 ವಿಮಾನ ಕಣ್ಮರೆಯಾಗಿದೆ ಎಂದು ರಷ್ಯಾದ ತುರ್ತು ಸೇವಾ ಮುಖ್ಯಸ್ಥರು ತಿಳಿಸಿದ್ದಾರೆ.

ಸಂವಹನ ಸಾಧನಗಳನ್ನು ಪರೀಕ್ಷಿಸಲು ಹಾರಾಟ ನಡೆಸುತ್ತಿದ್ದಾಗ ಕಣ್ಮರೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹವಾಮಾನ ಹದೆಗೆಟ್ಟಿದ್ದ ಪರಿಣಾಮ ದಿಕ್ಕು ಬದಲಾಗಿರಬಹುದು ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button