ಹುಬ್ಬಳ್ಳಿ – ಧಾರವಾಡದಲ್ಲಿ ಮುಂದುವರೆದ ಚಿರತೆ ಪತ್ತೆ ಕಾರ್ಯ

ಧಾರವಾಡ: ಹುಬ್ಬಳ್ಳಿ ಧಾರವಾಡದಲ್ಲಿ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಸ್ಥಳಿಯರಲ್ಲಿ ಆತಂಕ ಮೂಂಡಿಸಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಆದರೆ ಧಾರವಾಡದ ಗ್ರಾಮವೊಂದರಲ್ಲಿ ಕಾಣಿಸಿಕೊಂಡಿದೆ ಚಿರತೆ ಪತ್ತೆ ಕಾರ್ಯವನ್ನು ಈಗ ಸ್ಥಗಿತ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಚಿರತೆಗಾಗಿ ಎರಡು ಟೀಂ ಮಾಡಿಕೊಂಡು ಶೋಧ ಕಾರ್ಯ:
ಕಳೆದ ಸೆ.18 ರಂದು ಹುಬ್ಬಳ್ಳಿಯ ರಾಜ್ ನಗರದ ಕೇಂದ್ರಿಯ ವಿದ್ಯಾಲಯದಲ್ಲಿ ಸಾರ್ವಜನಿಕರಿಗೆ ಕಾಣಿಸಿಕೊಂಡು, ಸ್ಥಳಿಯರ ನಗರವಾಸಿಗಳಲ್ಲಿ ಆತಂಕ ಸೃಷ್ಠಿಮಾಡಿದ್ದ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ನೃಪತುಂಗ ಬೆಟ್ಟ, ಶಿರಡಿ ನಗರ, ರಾಜ್ ನಗರದಲ್ಲಿ ಚಿರತೆ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದು, ಇಂದು ಕೂಡಾ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಹುಬ್ಬಳ್ಳಿ ವಲಯ ಅರಣ್ಯ ಇಲಾಖೆ ಎ ಎಸ್ ತೆಗ್ಗಿನಮನಿ ಅವರ ನೇತೃತ್ವದಲ್ಲಿ ಎರಡು ಟೀಂಗಳನ್ನು ಮಾಡಿಕೊಂಡು ಚಿರತೆ ಕೊಬಿಂಗ್ ಕಾರ್ಯ ನಡೆಸಲಾಗುತ್ತಿದೆ. ಚಿರತೆ ಒತ್ತೆಗಾಗಿ ನೃಪತುಂಗ ಬೆಟ್ಟ ಸೇರಿದಂತೆ ರಾಜ್ ನಗರದ ಕೇಂದ್ರಿ ವಿದ್ಯಾಲಯದಲ್ಲಿ ಅರಣ್ಯ ಇಲಾಖೆಯ ಟೀಂ ಶೋಧ ನಡೆಸುತ್ತಿದೆ. ಡೋಣ್ ಮೂಲಕವು ನೃಪತುಂಗ ಬೆಟ್ಟದಲ್ಲಿ ಶೋಧ ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರಿ ವಿದ್ಯಾಲಯ ಸೇರಿದಂತೆ ಸುತ್ತುಮುತ್ತಲಿನ 12 ಶಾಲೆ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡೆಸಿದೆ. ಇನ್ನೂ ರಾಜ್ ನಗರದ ಸುತ್ತಮುತ್ತಲಿನ ಪ್ರದೇಶವಾಸಿಗಳು ಸಂಜೆ ಹಾಗೂ ಮುಂಜಾನೆ ಸಮಯದಲ್ಲಿ ಯಾರು ಓಡಾಟ ಮಾಡಬಾರದು ಎಂದು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಧಾರವಾಡದ ಕವಲಗೇರಿ ಗ್ರಾಮದಲ್ಲಿ ಶೋಧ ಕಾರ್ಯ ಸ್ಥಗಿತ:
ಕಳೆದ ಸೆ.20ರಂದು ತಡರಾತ್ರಿ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರೊಬ್ಬರಿಗೆ ಕಾಣಿಸಿಕೊಂಡ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆಯ ಪತ್ತೆ ಕಾರ್ಯವನ್ನು ಈಗ ಸ್ಥಗಿತ ಮಾಡಲಾಗಿದೆ. ಕಳೆದ ದಿನ ಕವಲಗೇರಿ ಗ್ರಾಮದ ಶಿವಾನಂದ ಕತ್ತಿಯವರ ಕಬ್ಬಿನ ಹೊಲದಲ್ಲಿ ಚಿರತೆ ಪತ್ತೆಗಾಗಿ ವಲಯ ಅರಣ್ಯ ಅಧಿಕಾರಿಗಳ ಆರ್ ಎಸ್ ಉಪ್ಪಾರ ನೇತೃತ್ವದಲ್ಲಿ ಶೋಧ ನಡೆಸಲಾಗಿತ್ತು. ಆದರೆ ಚಿರತೆಯ ಯಾವುದೇ ಸುಳಿವು ಸಿಗದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿದ್ದಾರೆ. ಅಲ್ಲದೆ ಕವಲಗೇರಿ ಗ್ರಾಮಸ್ಥರಿಗೆ ಯಾರಿಗಾದರೂ ಚಿರತೆ ಕಂಡುಬಂದಿಲ್ಲಿ ಪೊಲೀಸ ಠಾಣೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿ ಹೋಗಿದ್ದಾರೆ.




