Uncategorizedಶಿವಮೊಗ್ಗ

ಸಂಘಪರಿವಾರವನ್ನು ಮೆಚ್ಚಿಸಲು ಸಿ ಟಿ ರವಿ ಮಾತು; ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಟೀಕೆ

ಶಿವಮೊಗ್ಗ: ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ಹೇಳಿಕೆ ನೀಡುತ್ತಲೇ ಇರುವ ಸಿ ಟಿ ರವಿ ಓರ್ವ ಅರೆಹುಚ್ಚ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ ಹರಿಹಾಯ್ದಿದ್ದಾರೆ.

ನಗರದಲ್ಲಿಂದು ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ 77ನೇ ಜನ್ಮದಿನಾಚರಣೆ ಅಂಗವಾಗಿ ರನ್‌ ಫಾರ್ ರಾಜೀವ್‌ ಮ್ಯಾರಥಾನ್‌ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಿಟಿ ರವಿ ಒಬ್ಬ ಅರೆಹುಚ್ಚ. ಯಾಕೆ ಈಗ ಈ ತರಹದ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಎಂದರೆ ಮಂತ್ರಿ ಪದವಿ ಸಿಕ್ಕಿಲ್ಲ. ಅವರಿಗೆ ಮಂತ್ರಿಯಾಗುವ ಬಯಕೆ ಇದೆ. ಈ ತರಹ ಗಾಂಧಿ ಪರಿವಾರದ ವಿರುದ್ಧ ಮಾತನಾಡಿದರೆ ಮಂತ್ರಿ ಪದವಿ ಖಚಿತವಾಗಿ ಸಿಗುತ್ತೆ ಎಂಬುದು ರವಿ ನಂಬಿಕೆ. ಇನ್ನು ಅಮಿತ್‌ ಶಾ, ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ನಾಯಕರನ್ನ ಮೆಚ್ಚಿಸಬೇಕಿದೆ. ರವಿ ಅವರಿಗೇನಾದರೂ ಮಾನ ಮರ್ಯಾದೆ ಇದ್ದರೆ ನೆಹರು ಹಾಗೂ ರಾಜೀವ್‌ ಗಾಂಧಿ ಬಗ್ಗೆ ತಿಳಿದುಕೊಂಡು ಮಾತನಾಡದಬೇಕು. ದೇಶಕ್ಕೆ ಅವರದ್ಧೇ ಆದ ಕೊಡುಗೆ ಇದೆ. ಇವರು ಮರೆಯಬಾರದು ಎಂದರು.

ಆರ್‌ಎಸ್‌ಎಸ್‌ ಮನಸ್ಥಿತಿಯವರಿಗೆ ಇಂಥ ವಿಷಯಗಳೇ ಸಿಗೋದು. ಈ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮುಖಂಡರು ದೇಶಕ್ಕಾಗಿ ಒಂದಾದರೂ ಒಳ್ಳೇ ಕೆಲಸ ಮಾಡಿದ್ದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಆರ್‌ಎಸ್‌ಎಸ್​ನವರೇನಾದರೂ ಭಾಗವಹಿಸಿದ್ದರೆ ಆಗ ಹೇಳಲಿ. ಇಬ್ಬರು ಪ್ರಧಾನಿಗಳು, ರಾಜೀವ್‌ ಹಾಗೂ ಇಂದಿರಾ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದವರು. ಅವರ ಬಗ್ಗೆ ಈ ತರಹ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button