ಮಂಗಳೂರಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು; ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

ಮಂಗಳೂರು: ಜಿಲ್ಲಾಡಳಿತ ಏಪಕ್ಷೀಯವಾಗಿ ನಿರ್ಧಾರ ಕೈಗೊಂಡು ನಗರದ ಖಾಸಗಿ ಬಸ್ಗಳಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿ ಜಾತ್ಯತೀತ ಪಕ್ಷಗಳ ಒಕ್ಕೂಟದಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಿಪಿಎಂ ಮುಖಂಡ ವಸಂತ ಆಚಾರಿ ಮಾತನಾಡಿ, ಟಿಕೆಟ್ ದರ ನಿಗದಿಗೊಳಿಸುವ ಮೊದಲು ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕಿತ್ತು. ಆದರೆ ಜಿಲ್ಲಾಧಿಕಾರಿ ಏಕಾಏಕಿ ನಿರ್ಧಾರ ಕೈಗೊಂಡು, ಹೆಚ್ಚುವರಿ ದರ ನಿಗದಿಗೊಳಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಪ್ರಯಾಣ ದರ ದುಪ್ಪಟ್ಟಾಗಿರುವುದರಿಂದ ಕೂಲಿ ಕಾರ್ಮಿಕರು, ಬಡವರ್ಗದವರು ಬಸ್ಗಳಲ್ಲಿ ಸಂಚರಿಸಲು ಕಷ್ಟ ಅನುಭವಿಸುವಂತಾಗಿದೆ. ಜಿಲ್ಲಾಧಿಕಾರಿ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಬಸ್ ಮಾಲಕರಿಗೆ ಪರವಾಗಿ ಕ್ರಮ ಜರುಗಿಸಿದ್ದಾರೆ ಎಂದು ದೂರಿದರು.
ಮುಖಂಡರಾದ ಸದಾಶಿವ ಉಳ್ಳಾಲ, ಮುಹಮ್ಮದ್ ಕುಂಜತ್ತಬೈಲ್, ನೀರಜ್ ಪಾಲ್, ಕೃಷ್ಣಪ್ಪ ಸಾಲ್ಯಾನ್, ಸೀತಾರಾಂ ಬೇರಿಂಜ, ವಿ.ಕುಕ್ಯಾನ್, ಅಲ್ತಾಫ್, ಎಂ.ದೇವದಾಸ್, ಬಾಬಿನ್ ಪ್ರೀತಮ್, ಕರುಣಾಕರ್, ಪುಷ್ಪರಾಜ್, ಸುಮತಿ ಹೆಗಡೆ, ರಘು ಎಕ್ಕಾರು, ವಿಶುಕುಮಾರ್, ಸಂತೋಷ್ ಕುಮಾರ್ ಬಜಾಲ್, ಜೆರಾಲ್ಡ್, ದುರ್ಗಾಪ್ರಸಾದ್ಜಯಂತಿ ಶೆಟ್ಟಿ, ಲತೀಫ್ ಬೆಂಗ್ರೆ ಮುಂತಾದವರಿದ್ದರು.




