Uncategorizedರಾಷ್ಟ್ರೀಯಸುದ್ದಿ
ಗುರುಗ್ರಾಮದ ದೇವಸ್ಥಾನದಲ್ಲಿ ಅರ್ಚಕನ ಶವ ಪತ್ತೆ

ಗುರುಗ್ರಾಮ್ (ಹರಿಯಾಣ): ಗುರುಗ್ರಾಮ್ನ ಕದರ್ಪುರ ಪ್ರದೇಶದ ಸ್ಥಳೀಯ ದೇವಸ್ಥಾನದಲ್ಲಿ 90 ವರ್ಷದ ಅರ್ಚಕರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಮಾಹಿತಿಯನ್ನು ನೀಡಿದ್ದಾರೆ.
ಪೊಲೀಸರ ಪ್ರಕಾರ ಸ್ಥಳೀಯರು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವಾಗ, ಪೂಜಾರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆತನ ಕುತ್ತಿಗೆಯ ಮೇಲೆ ಹರಿತವಾದ ಆಯುಧದಿಂದ ಹೊಡೆತಗಳ ಗುರುತುಗಳಿವೆ ಎಂದು ಹೇಳಲಾಗಿದೆ.
ಫೋರೆನ್ಸಿಕ್ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಗೋವಿಂದದಾಸ್ ಕಳೆದ 35 ವರ್ಷಗಳಿಂದ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ, ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸೆಕ್ಟರ್ 65ರ ಪೊಲೀಸ್ ಠಾಣೆ ಪ್ರಭಾರಿ ದೀಪಕ್ಕುಮಾರ್ ತಿಳಿಸಿದ್ದಾರೆ.

