Breaking Newsಇತರ ಕ್ರೀಡೆಕ್ರೀಡೆ

ಬೆಳ್ಳಿ ಖಚಿತಪಡಿಸಿದ ಬಂಗಾರದ ರವಿ

ಟೋಕಿಯೋ: ಕಜಕಿಸ್ತಾನದ ನ್ಯುರಿಸ್ಲಾಮ್ ಸನಯೇವ್ ವಿರುದ್ಧ ಜಯ ಗಳಿಸಿದ ಭಾರತದ ರವಿ ಕುಮಾರ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನಕ್ಕೆ ಗುರಿ ಇಟ್ಟು ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಆದರೆ ದೀಪಕ್ ಪೂನಿಯಾ ಸೋಲಿಗೆ ಶರಣಾಗಿದ್ದಾರೆ.

57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿ ಕುಮಾರ್ ಒಂದು ನಿಮಿಷ ಇರುವವರೆಗೂ ಸೋಲಿನ ಆತಂಕ ಹುಟ್ಟಿಸಿದ್ದರು, ಆದರೆ ಅಂತಿಮ ಕ್ಷಣದಲ್ಲಿ ಫಾಲ್ ಮೂಲಕ ರವಿ ಫೈನಲ್ ಪ್ರವೇಶಿಸಿದರು.

ಈ ಮೂಲಕ ರವಿ ಕುಮಾರ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಐದನೇ ಕುಸ್ತಿಪಟು ಎನಿಸಿದರು. ಕೆ.ಡಿ.ಜಾದವ್, ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ ಮತ್ತು ಸಾಕ್ಷಿ ಮಲಿಕ್ ಇದುವರೆಗೂ ಪದಕ ಗೆದ್ದ ಕುಸ್ತಿಪಟುಗಳು.

Spread the love

Related Articles

Leave a Reply

Your email address will not be published. Required fields are marked *

Back to top button