Bommai Cabinet: ಪ್ರಮಾಣ ವಚನ ಸ್ವೀಕರಿಸಿದ 29 ನೂತನ ಸಚಿವರು

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ನೂತನ ಸಚಿವರಾಗಿ 29 ಶಾಸಕರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು
ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲೇ ಇದ್ದು ಲಾಬಿ ನಡೆಸಿದ್ದ ಶಶಿಕಲಾ ಜೊಲ್ಲೆ ಸ್ಥಾನ ಖಚಿತವಾಗುತ್ತಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಅವರು ಬೆಂಗಳೂರಿಗೆ ಬರಬೇಕಾದ ವಿಮಾನ ಅರ್ಧ ಗಂಟೆ ವಿಳಂಬವಾದ ಕಾರಣ, ಏರ್ಪೋರ್ಟ್ನಿಂದ ಅವರು ಝೀರೋ ಟ್ರಾಫಿಕ್ನಲ್ಲಿ ರಾಜಭವನಕ್ಕೆ ಆಗಮಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದ ಸಮಾರಂಭಕ್ಕೆ ಮಾಜಿ ಸಿಎಂ ಬಿ ಎಸ್ ವೈ ಯಡಿಯೂರಪ್ಪ ಕೂಡ ಆಗಮಿಸಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು:
1. ಅರಗ ಜ್ಞಾನೇಂದ್ರ-ತೀರ್ಥಹಳ್ಳಿ
2. ಹಾಲಪ್ಪ ಆಚಾರ್-ಯಲಬುರ್ಗ
3. ಶಂಕರ ಪಾಟೀಲ್ ಮುನೇನಕೊಪ್ಪ-ನವಲಗುಂದ
4. ಮುರುಗೇಶ್ ನಿರಾಣಿ-ಬೀಳಗಿ
5. ಶ್ರೀರಾಮುಲು-ಮೊಳಕಾಲ್ಮೂರು
6. ಶಶಿಕಲಾ ಜೊಲ್ಲೆ-ನಿಪ್ಪಾಣಿ
7. ಆರ್.ಅಶೋಕ್-ಪದ್ಮನಾಭನಗರ
8. ಬೈರತಿ ಬಸವರಾಜು-ಕೆ.ಆರ್.ಪುರಂ
9. ಎಸ್.ಟಿ.ಸೋಮಶೇಖರ್-ಯಶವಂತಪುರ
10. ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ
11. ಎಂ.ಟಿ.ಬಿ.ನಾಗರಾಜ್-ಮೇಲ್ಮನೆ
12. ಕೆ.ಸಿ.ನಾರಾಯಣಗೌಡ-ಕೆ.ಆರ್.ಪೇಟೆ
13. ಬಿ.ಸಿ.ಪಾಟೀಲ್-ಹಿರೇಕೆರೂರು
14. ಮುನಿರತ್ನ-ಆರ್.ಆರ್.ನಗರ
15. ವಿ.ಸೋಮಣ್ಣ-ಗೋವಿಂದರಾಜನಗರ
16. ಉಮೇಶ್ ಕತ್ತಿ-ಹುಕ್ಕೇರಿ
17. ಪ್ರಭುಚವ್ಹಾಣ್-ಔರಾದ್
18. ಕೆ.ಗೋಪಾಲಯ್ಯ-ಮಹಾಲಕ್ಷ್ಮಿಲೇಔಟ್
19. ಅಶ್ವತ್ಥನಾರಾಯಣ-ಮಲ್ಲೇಶ್ವರಂ
20. ಶಿವರಾಂ ಹೆಬ್ಬಾರ್-ಯಲ್ಲಾಪುರ
21. ಎಸ್.ಅಂಗಾರ- ಸುಳ್ಯ
22. ಕೋಟಾ ಶ್ರೀನಿವಾಸಪೂಜಾರಿ -ಮೇಲ್ಮನೆ
23. ಆನಂದ್ಸಿಂಗ್-ಹೊಸಪೇಟೆ
24. ಬಿ.ಸಿ.ನಾಗೇಶ್- ತಿಪಟೂರು
25. ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ
26. ಸುನೀಲ್ ಕುಮಾರ್-ಕಾರ್ಕಳ
27. ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
28. ಗೋವಿಂದ ಕಾರಜೋಳ-ಮುಧೋಳ
29. ಸಿ.ಸಿ.ಪಾಟೀಲ್-ನರಗುಂದ
