Breaking NewsLatestಇತರ ಕ್ರೀಡೆಕ್ರೀಡೆ

ಒಲಂಪಿಕ್ಸ್ ನಲ್ಲಿ ಪದಕದ ಬೇಟೆ ಮುಂದುವರೆಸಿದ ಭಾರತ: ಬೆಳ್ಳಿಯಲ್ಲೇ ಬೆಳಗಿದ ರವಿ ಕುಮಾರ್ ದಹಿಯಾ

ಟೋಕಿಯೋ: ರಷ್ಯಾದ ಉಗೇವ್ ಜರುವ್ ವಿರುದ್ಧ ನಡೆದ 57 ಕೆಜಿ ಫ್ರೀ ಸ್ಟೈಲ್ ಕುಸ್ತಿಯ ಫೈನಲ್ ನಲ್ಲಿ ಭಾರತದ ರವಿ ಕುಮಾರ್ ದಹಿಯಾ 7-4 ಅಂತರದಲ್ಲಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಆದರೆ ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ದೀಪಕ್ ಪೂನಿಯಾ 2-3 ಅಂತರದಲ್ಲಿ ಸೋಲುಂಡು ಪದಕದಿಂದ ವಂಚಿತರಾಗಿದ್ದಾರೆ. ರವಿ ಅವರ ಬೆಳ್ಳಿಯೊಂದಿಗೆ ಭಾರತ ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಒಟ್ಟು 5 ಪದಕಗಳ ಸಾಧನೆ ಮಾಡಿತು.

ಆರಂಭದಲ್ಲಿ 2-2ರಲ್ಲಿ ಸಮಬಲ ಸಾಧಿಸಿದ್ದರೂ ಉಗೇವ್ ನಂತರದ ಕೆಲ ಹೊತ್ತಿನಲ್ಲಿ ಮೇಲುಗಯ ಸಾಧಿಸಿ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡರು. ವಿಶ್ವ ಚಾಂಪಿಯನ್ಷಿಪ್ ನಲ್ಲಿ ಕಂಚು ಹಾಗೂ ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವ ರವಿ ಕುಮಾರ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಮತ್ತೊಂದು ಸಾಧನೆ ಮಾಡಿದರು. ಉತ್ತು ವರ್ಷಗಳ ಕಾಲ ರವಿ ಅವರ ತಂದೆ ರಾಕೇಶ್ ದಹಿಯಾ ಹರಿಯಾಣದ ನಹ್ರಿ ಗ್ರಾಮದಿಂದ ಉತ್ತರ ದಿಲ್ಲಿಯ ಛಾತ್ರಶಾಲಾದಲ್ಲಿ ತರಬೇತಿ ಪಡೆಯುತ್ತಿರುವ ರವಿ ಕುಮಾರ್ ಗೆ ಮನೆಯಿಂದ ಹಾಲು ಮತ್ತು ಹಣ್ಣನ್ನು ತಂದು ಹಳ್ಳಿಗೆ ಹಿಂದಿರುತ್ತಿದ್ದ ಆ ಸೇವೆಗೆ ಕೊನೆಗೂ ಫಲ ಸಿಕ್ಕಿತು.

ದಿನದ ಇನ್ನೊಂದು ಹೋರಾಟದಲ್ಲಿ ಜಗತ್ತಿನ ಅತ್ಯಂತ ಚಿಕ್ಕರಾಷ್ಟ್ರ ಸ್ಯಾನ್ ಮರಿನೊದ ನಝೀಮ್ ಅಮೈಲ್ ವಿರುದ್ಧ ನಡೆದ ಹೋರಾಟದಲ್ಲಿ ಭಾರತದ ದೀಪಕ್ ಪುನಿಯಾ 2-3 ಅಂತರದಲ್ಲಿ ಸೋಲಿಗೆ ಶರಣಾದರು. 2-2 ರಲ್ಲಿ ಸಮಬಲ ಕಂಡಿದ್ದ ದೀಪಕ್ ಅಂತಿಮ ಕ್ಷಣದಲ್ಲಿ ಒಂದು ಅಂಕದಿಂದ ಪದಕ ವಂಚಿತರಾದರು.

Spread the love

Related Articles

Leave a Reply

Your email address will not be published. Required fields are marked *

Back to top button