Breaking Newsಇತರ ಕ್ರೀಡೆಕ್ರೀಡೆ
ಹಾಕಿ: ಚಿನ್ನವಿಲ್ಲ, ಬೆಳ್ಳಿ ಇಲ್ಲ, ಕಂಚಿಗಾಗಿ ಫೈಟ್

ಟೋಕಿಯೋ: ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 1-2 ಗೋಲುಗಳಿಂದ ಸೋಲನುಭವಿಸಿದ ಭಾರತ ಮಹಿಳಾ ತಂಡ ಫೈನಲ್ ತಲಪುವಲ್ಲಿ ವಿಫಲವಾಗಿದ್ದು, ಈ ಕಂಚಿಗಾಗಿ ಸೆಣಸಲಿದೆ.
ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿ ಗೋಲು ಗಳಿಸಿ ಮೇಲುಗೈ ಸಾಧಿಸಿತು. ಭಾರತ ತಂಡ ಎಲ್ಲಿಯೂ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ತಂಡವಾಗಿ ಆಡಲಿಲ್ಲ, ಬದಲಾಗಿ ಅರ್ಜೆಂಟೀನಾಕ್ಕೆ ಉತ್ತಮ ರೀತಿಯಲ್ಲಿ ಪೈಪೋಟಿಯನ್ನು ನೀಡಿತ್ತು. ಆದರೆ ಪೆನಾಲ್ಟಿ ಕಾರ್ನರ್ ಗಳು ಪಂದ್ಯದ ಗತಿಯನ್ನೇ ಬದಲಾಯಿಸಿವು.
ಮಾರಿಯಾ ಬಾಇರಯೊನಿವೋ (18 ಮತ್ತು 36 ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಭಾರತದ ಜಯದ ಆಸೆಯನ್ನು ಕಸಿದುಕೊಂಡಿತು. ಅಂತಿಮ ಕ್ವಾರ್ಟರ್ ನಲ್ಲಿ ಭಾರತ ಉತ್ತಮ ಪೈಪೋಟಿ ನೀಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ಕಂಚಿನ ಪದಕ್ಕಾಗಿ ಭಾರತ ಗ್ರೇಟ್ ಬ್ರಿಟನ್ ವಿರುದ್ಧ ಆಡಲಿದೆ.
