Latestರಾಜ್ಯ

ಪಕ್ಷಕ್ಕಾಗಿ ದುಡಿದದ್ದನ್ನು ಮರೆತಿದ್ದಾರೆ; ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕಿ ಪೂರ್ಣಿಮಾ ಅಸಮಾಧಾನ

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸ್ಥಾನ ಕೈತಪ್ಪಿದ್ದು, ಇದರಿಂದ ಅವರು ತೀವ್ರ ಬೇಸರಗೊಂಡಿದ್ದಾರೆ.

ಈ ಬಾರಿ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಮತ್ತು ಪೂರ್ಣಿಮಾ ಅವರಿಗೆ ಅವಕಾಶ ಸಿಗಲಿದೆ ಎಂದೇ ಹೇಳಲಾಗಿತ್ತು. ಅವರಿಗೆ ಈ ಬಗ್ಗೆ ಸುಳಿವು ಕೂಡ ಸಿಕ್ಕಿತ್ತೆನ್ನಲಾಗಿದೆ. ಆದರಡೆ ಕಡೇ ಕ್ಷಣದಲ್ಲಿ ಪೂರ್ಣಿಮಾ ಅವರಿಗೆ ನಿರಾಸೆಯಾಗುವ ತೀರ್ಮಾನ ಹೊರಬಿದ್ದು, ಜೊಲ್ಲೆಯವರೇ ಸಚಿವೆಯಾಗಿದ್ದಾರೆ.

ನಿರೀಕ್ಷಿಸಿದ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಪೂರ್ಣಿಂಖಾ ಶ್ರೀನಿವಾಸ್, ತಾವು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರಲಿಲ್ಲ, ಯಾವ ಹಗರಣಗಳಲ್ಲಿಯೂ ಸಿಲುಕಿರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹಗರಣಗಳಲ್ಲಿ ಸಿಲುಕಿರುವವರಿಗೇ ಮನ್ನಣೆ ನೀಡಲಾಗಿದೆ ಎಂಬ ವಿಚಾರವನ್ನು ನೋವಿನಿಂದ ಹೇಳಿದ್ದಾರೆ. ನಿಜವಾದ ಬಲದಿಂದ ಗೆದ್ದುಬಂದ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಪೂರ್ಣಿಮಾ, ತಾವು ಪಕ್ಷನಿಷ್ಠೆಯಿಂದ ದುಡಿದದ್ದನ್ನು ಮರೆತು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button