Breaking Newsಇತರ ಕ್ರೀಡೆಕ್ರೀಡೆ
Tokyo Paralympics: ದೇವೇಂದ್ರಗೆ ಬೆಳ್ಳಿ , ಸುಂದರ್ ಗೆ ಕಂಚು

ಟೋಕಿಯೋ : ಸೋಮವಾರ ಟೋಕಿಯೋದಲ್ಲಿ ಭಾರತಕ್ಕೆ ಸಂಭ್ರಮದ ದಿನ. ಶೂಟಿಂಗ್ ನಲ್ಲಿ ಅವನಿ ಚಿನ್ನ ಮತ್ತು ಡಿಸ್ಕಸ್ ನಲ್ಲಿ ಯೋಗೇಶ್ ಬೆಳ್ಳಿ ಪದಕ ಗೆದ್ದ ನಂತರ ಖ್ಯಾತ ಜಾವೆಲಿನ್ ಎಸೆತಗಾರ ದೇವೇಂದ್ರ ಝಝಾರಿಯಾ ಬೆಳ್ಳಿ ಹಾಗೂ ಸುಂದರ್ ಸಿಂಗ್ ಗುರ್ಜರ್ ಕಂಚಿನ ಸಾಧನೆ ಮಾಡಿದ್ದಾರೆ.
ಅಥೇನ್ಸ್ ಹಾಗೂ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಗುರಿ ಹೊಂದಿದ್ದ ದೇವೇಂದ್ರ ಈ ಬಾರಿ ಚಿನ್ನಕ್ಕೆ ಗುರಿ ಇಡುವಲ್ಲಿ ವಿಫಲರಾದರು.
64.35 ಮೀಟರ್ ದೂರಕ್ಕೆ ಎಸೆದ ದೇವೇಂದ್ರ ಎರಡನೇ ಸ್ಥಾನ ಗಳಿಸಿದರೆ 62.58 ಮೀ. ದೂರಕ್ಕೆ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ದೇವೇಂದ್ರ ಅವರು ಪ್ಯಾರಾಲಿಂಪಿಕ್ಸ್ ನಲ್ಲಿ ಮೂರು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎನಿಸಿದರು.
