Breaking NewsLatestಇತರ ಕ್ರೀಡೆಕ್ರೀಡೆ

Tokyo Paralympics: ಅವನಿಗೆ ಐತಿಹಾಸಿಕ ಚಿನ್ನ, ಯೋಗೇಶ್ ಗೆ ಬೆಳ್ಳಿ

ಟೋಕಿಯೋ : 19 ವರ್ಷದ ಅವನಿ ಲೆಖಾರ ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.

10ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ SH1 ವಿಭಾಗದಲ್ಲಿ ಸ್ಪರ್ಧಿಸಿದ್ದ ಅವನಿ‌ 249.6 ಅಂಕಗಳನ್ನು ಗಳಿಸಿ ಚಿನ್ನ ಗೆದ್ದಿರುವುದು ಮಾತ್ರವಲ್ಲ, ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವನಿ ಪಾತ್ರಾದರು. ಜೈಪುರ ಮೂಲದ ಅವನಿ‌ ಅಪಘಾತದಲ್ಲಿ ಬೆನ್ನು ಮೂಳೆ ಮುರಿತಕ್ಕೆ ಗುರಿಯಾಗಿದ್ದರು.

ಯೋಗೇಶ್

ಪುರುಷರ ಡಿಸ್ಕಸ್ ನಲ್ಲಿ‌ ಯೋಗೇಶ್ ಕತೂನಿಯಾ 44.38 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ಗೆದ್ದರು.

Related Articles

Leave a Reply

Your email address will not be published. Required fields are marked *

Back to top button