Breaking Newsಇತರ ಕ್ರೀಡೆಕ್ರೀಡೆ

46 ವರ್ಷಗಳ ನಂತರ ಭಾರತ ಬಾಸ್ಕೆಟ್ ಬಾಲ್ ಏಷ್ಯಾಕಪ್ ಗೆ ಅರ್ಹತೆ

ಬೆಂಗಳೂರು : ಪ್ಯಾಲಿಸ್ತೇನ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಭಾರತ ಬಾಸ್ಕೆಟ್‌ಬಾಲ್ ತಂಡ 46 ವರ್ಷಗಳ ಬಳಿಕ ಏಷ್ಯಾ ಕಪ್ ಗೆ ಅರ್ಹತೆ ಪಡೆದಿದೆ. 1975ರಲ್ಲಿ ಭಾರತ ನಾಲ್ಕನೇ ಸ್ಥಾನ ಗಳಿಸಿತ್ತು. 2017ರಲ್ಲೂ ಭಾರತ ಗ್ರೂಪ್ ಹಂತದಲ್ಲೇ ಸೋಲನುಭವಿಸಿತ್ತು.

ಸೌದಿ ಅರೇಬಿಯಾ ತಂಡ ಪ್ಯಾಲಿಸ್ತೇನ್ ವಿರುದ್ಧ ಜಯ ಗಳಿಸುವುದರೊಂದಿಗೆ ಭಾರತ 16ನೇ ತಂಡವಾಗಿ ಅರ್ಹತೆ ಪಡೆಯಿತು. ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲನುಭವಿಸಿದ ಭಾರತ 79-77 ಅಂತರದಲ್ಲಿ ಪ್ಯಾಲಿಸ್ತೇನ್ ವಿರುದ್ಧ ಜಯ ಗಳಿಸಿತ್ತು. ಭಾರತಕ್ಕೆ ಅರ್ಹತೆ ಸಿಗಬೇಕಾದರೆ ಸೌದಿ ವಿರುದ್ಧ ಪ್ಯಾಲಿಸ್ತೇನ್ ಸೋಲಬೇಕಿತ್ತು ಇಲ್ಲವೇ ಬೃಹತ್ ಅಂತರದಲ್ಲಿ ಜಯ ಗಳಿಸಬೇಕಿತ್ತು.

ಎಚ್ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಭಾರತ ಮುಂದಿನ ವರ್ಷ ಜಕಾರ್ತದಲ್ಲಿ ನಡೆಯಲಿರುವ ಫಿಬಾ ಏಷ್ಯಾ ಕಪ್ ನಲ್ಲಿ ಸ್ಪರ್ಧಿಸಲಿದೆ.

Related Articles

Leave a Reply

Your email address will not be published. Required fields are marked *

Back to top button