ರಾಷ್ಟ್ರೀಯ

ಕಾನೂನು ಭದ್ರತೆ, ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸೀರಂ ಇನ್​ಸ್ಟಿಟ್ಯೂಟ್ ಒತ್ತಾಯ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳ ಉತ್ಪಾದಕ ಕಂಪನಿಗಳಿಗೆ ಕಾನೂನು ಭದ್ರತೆ ಹಾಗೂ ನಷ್ಟ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಕಂಪನಿ ಒತ್ತಾಯಿಸಿದೆ.

ನಷ್ಟ ಪರಿಹಾರದ ಕುರಿತು ಕೇಂದ್ರ ಸರ್ಕಾರವು ಫೈಜರ್ ಹಾಗೂ ಮಾಡರ್ನಾ ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದೆ. ಇದರ ಮಧ್ಯೆ ಭಾರತೀಯ ಲಸಿಕೆ ಉತ್ಪಾದಕೆ ಕಂಪನಿಗಳಿಗೂ ಕಾನೂನು ಭದ್ರತೆ ಜೊತೆಗೆ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದೆ.

ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ಕಳೆದ ವರ್ಷ ಫೈಜರ್-ಬಯೋ-ಎನ್-ಟೆಕ್ ಕಂಪನಿಯು ತನ್ನ ಕೊವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿತ್ತು. ಕಾನೂನು ಭದ್ರತೆ ಹಾಗೂ ನಷ್ಟ ಪರಿಹಾರದ ಷರತ್ತು ವಿಧಿಸಿದ ಹಿನ್ನೆಲೆ ಚರ್ಚೆ ವಿಫಲವಾಗಿತ್ತು.

ಕೇಂದ್ರ ಸರ್ಕಾರ ನೀಡುವ ಕಾನೂನು ಭದ್ರತೆಯು ಜೀವ ವಿಮೆ ರೀತಿಯಲ್ಲಿ ಕೆಲಸ ಮಾಡಲಿದೆ. ಒಂದು ವೇಳೆ ಕೊರೊನಾವೈರಸ್ ಲಸಿಕೆಯನ್ನು ಪಡೆದ ವ್ಯಕ್ತಿಯು ಯಾವುದೇ ಅಡ್ಡ ಪರಿಣಾಮಗಳಿಂದ ಮೃತಪಟ್ಟರೆ, ಅಂಥವರಿಗೆ ಕೇಂದ್ರ ಸರ್ಕಾರವೇ ಪರಿಹಾರ ನೀಡಬೇಕಾಗುತ್ತದೆಯೇ ವಿನಃ ಕಂಪನಿಯ ಕಡೆಯಿಂದ ಯಾವುದೇ ರೀತಿ ಪರಿಹಾರ ನೀಡಲಾಗುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button