ಉಕ್ರೇನ್ ಮೇಲೆ ಯುದ್ಧ ಸಾರಿರುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ: ಝೆಲೆನ್ಸ್ಕಿ

ಉಕ್ರೇನ್: ಉಕ್ರೇನ್ ನಾಗರಿಕರ ಮೇಲೆ ಯುದ್ಧ ಮಾಡುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಅತಿಕ್ರಮಿಸುತ್ತಿರುವ ಹಾಗೂ ಹತ್ಯೆ ಮಾಡುತ್ತಿರುವ ರಷ್ಯಾದ ಪಡೆಗಳನ್ನು ಉಕ್ರೇನ್ ಎಂದು ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ ಎಂದು ಝೆಲೆನ್ಸ್ಕಿ ಆಕ್ರೋಶದಿಂದ ಹೇಳಿದ್ದಾರೆ.
ಉಕ್ರೇನ್ ಅತಿಕ್ರಮಿಸಿಕೊಳ್ಳಲು ಬರುತ್ತಿರುವ ನಿಮಗೆ ಇಲ್ಲಿ ಸಮಾಧಿಗಳನ್ನು ಬಿಟ್ಟು ಮತ್ತೇನೂ ಸಿಗುವುದಿಲ್ಲ ಎಂದು ಅವರು ನೋವಿನಿಂದ ನುಡಿದಿದ್ದಾರೆ. ಆಸ್ಪತ್ರೆಗಳು, ನರ್ಸರಿಗಳು, ಶಾಲೆಗಳು ಸೇರಿದಂತೆ ದೇಶಾದ್ಯಂತ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ಕ್ರೂರ ದಾಳಿ ನಡೆಸಿದೆಯಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಉಕ್ರೇನ್ ಮಾಡಿರುವ ಈ ಆರೋಪವನ್ನು ರಷ್ಯಾ ತಳ್ಳಿಹಾಕಿದೆ. ರಷ್ಯಾ ಉಕ್ರೇನ್ನಲ್ಲಿರುವ ನಾಗರಿಕರಿಗೆ ಯಾವುದೇ ಹಾನಿ ಮಾಡಿಲ್ಲ, ಬದಲಾಗಿ ಅಲ್ಲಿರುವ ರಾಷ್ಟ್ರೀಯವಾದಿಗಳು ಮತ್ತು ನವ ನಾಝಿಗಳ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ.




