Breaking NewsLatestರಾಷ್ಟ್ರೀಯಸುದ್ದಿ

ಕಾಶ್ಮೀರ ಕಣಿವೆಯಲ್ಲಿ ಹಿಮಕುಸಿತ : 30 ಜನರ ರಕ್ಷಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹಿಮಪಾತ ಉಂಟಾಗುತ್ತಿದೆ. ಇದ್ದರಿಂದ ವಾಹನಗಳೆಲ್ಲ ಸ್ಥಗಿತಗೊಂಡಿವೆ. ಇದೀಗ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತಗೊಂಡಿದೆ.

ಈ ವೇಳೆ 30 ನಾಗರಿಕರು ಸಿಲುಕಿಕೊಂಡಿದ್ದರು, ಅವರನ್ನು ಭಾರತೀಯ ಸೇನೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಇಂದು ಬೆಳಗಿನ ಜಾವ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಹಿಮಪಾತ ಕುಸಿತಗೊಂಡಿತ್ತು. ಇದರಲ್ಲಿ ಒಂದು ಮಗು ಸೇರಿದಂತೆ 30 ಜನರು ಸಿಲುಕಿಕೊಂಡಿದ್ದು, ಭಾರತೀಯ ಸೇನೆಯ ಸಿಬ್ಬಂದಿ ರಕ್ಷಿಸಿದ್ದಾರೆ.

ಇನ್ನು ಅವರು ತೀವ್ರ ಅಸ್ವಸ್ಥಗೊಂಡಿದ್ದು, ಆಹಾರ ನೀಡಲಾಗಿತ್ತು. ಸಿಕ್ಕಿಬಿದ್ದ ಪ್ರಯಾಣಿಕರನ್ನು ನಂತರ ಸೇನಾ ತಂಡವು ರಕ್ಷಿಸಿ, ನಂತರ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ.

ರಕ್ಷಿಸಲ್ಪಟ್ಟ ನಾಗರಿಕರು ಸಮಯೋಚಿತ ಕ್ರಮಕ್ಕಾಗಿ ಮತ್ತು ತಮ್ಮ ಜೀವಗಳನ್ನು ಉಳಿಸಿದ್ದಕ್ಕಾಗಿ ಸೇನೆಗೆ ಕೃತಜ್ಞತೆ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button