ಮನರಂಜನೆಸಿನಿಮಾಸೆಲೆಬ್ರಿಟಿ

ಲಂಕಾಸುರದಲ್ಲಿ ಜೋಡಿಯಾದ ವಿನೋದ್ ಪ್ರಭಾಕರ್, ಲೂಸ್ ಮಾದ

ಸ್ಯಾಂಡಲ್​ವುಡ್​ನಲ್ಲಿ ಒಂದರ ಹಿಂದೊದರಂತೆ ಆಕ್ಷನ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ಮರಿ ಟೈಗರ್ ವಿನೋದ್ ಪ್ರಭಾಕರ್. ತಮ್ಮದೇ ಅಭಿಮಾನಿ ವರ್ಗವನ್ನ ಹೊಂದಿರೋ ವಿನೋದ್ ಕಳೆದ ವರ್ಷ ತೆರೆಕಂಡ ರಾಬರ್ಟ್ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಸಾಕಷ್ಟು ಸೌಂಡ್ ಮಾಡಿದ್ದರು. ಇದೀಗ ವಿನೋದ್ ನಿರ್ಮಾಪಕರಾಗಿದ್ದು ಟೈಗರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾವೊಂದನ್ನ ನಿರ್ಮಾಣ ಮಾಡ್ತಿದ್ದಾರೆ.

ಟೈಗರ್ ಟಾಕೀಸ್​ನ ಮೊದಲ ಸಿನಿಮಾವಾಗಿ ಲಂಕಾಸುರ ನಿರ್ಮಾಣವಾಗುತ್ತಿದ್ದು ಈ ಚಿತ್ರದ ಮೂಲಕ ವಿನೋದ್ ಪ್ರಭಾಕರ್ ಪತ್ನಿ ನಿಶಾ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಗೆ ಟೈಗರ್ ಟಾಕೀಸ್ ಎಂದು ಹೆಸರಿಟ್ಟಿರೋ ವಿನೋದ್ ಈ ಮೂಲಕ ತಮ್ಮ ತಂದೆಯನ್ನ ನೆನಪು ಮಾಡಿಕೊಂಡಿದ್ದಾರೆ.

ಲಂಕಾಸುರ ಚಿತ್ರದ ವಿಶೇಷ ಪಾತ್ರದಲ್ಲಿ ನಟ ಲೂಸ್ ಮಾದ ಯೋಗಿ ಕಾಣಿಸಿಕೊಳ್ತಿದ್ದಾರೆ. ಸಹಾಸ ಪ್ರಧಾನ ಸಿನಿಮಾವಾದ ಲಂಕಾಸುರ ಚಿತ್ರವನ್ನ ಡಿ.ಪ್ರಮೋದ್ ಕುಮಾರ್ ನಿರ್ದೇಶನ ಮಾಡುತ್ತಿದ್ದು ಈಗಾಗ್ಲೆ ರಿಲೀಸ್ ಆಗಿರೋ ಪೋಸ್ಟರ್​ನಲ್ಲಿ ವಿನೋದ್ ಹಾಗೂ ಯೋಗಿ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡು ನಿರೀಕ್ಷೆ ಹುಟ್ಟುಹಾಕಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button