ಆರೋಗ್ಯಆಹಾರಲೈಫ್ ಸ್ಟೈಲ್
ಚಹಾ ಕುಡಿಯುವ ಮುನ್ನ ಇಲ್ಲಿ ಕೇಳಿ…

ಪವಿತ್ರಾ ಶೆಟ್ಟಿ
ಕೆಲವರಿಗೆ ಚಹಾ ಎಂದರೆ ಬಹಳ ಇಷ್ಟ. ದಿನಕ್ಕೆ ಎಷ್ಟು ಬಾರಿಯಾದರೂ ಅದನ್ನು ಅವರು ಸೇರಿಸುತ್ತಾರೆ. ಹೀಗೆ ಮಾಡುವುದರಿಂದ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಅವರಿಗೆ ಮರೆತೇ ಹೋಗಿರುತ್ತದೆ.
ನಿದ್ರಾಹೀನತೆಯ ಸಮಸ್ಯೆ ಇರುವವರು ಹೆಚ್ಚು ಚಹಾ ಕುಡಿಯುವ ಅಭ್ಯಾಸವನ್ನು ಬಿಡಬೇಕು. ಅದರಲ್ಲೂ ಮಧ್ಯಾಹ್ನದ ಬಳಿಕ ಚಹಾ ಕುಡಿಯುವುದರಿಂದ ಹೆಚ್ಚಿನ ಮಂದಿಗೆ ರಾತ್ರಿಹೊತ್ತು ಸರಿಯಾಗಿ ನಿದ್ದೆ ಬರುವುದಿಲ್ಲ.
ನಿನ್ನ ಚಹಾದಲ್ಲಿರುವ ನಿಕೋಟಿನ್ ಅಂಶ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟುಮಾಡುತ್ತದೆ. ಅಸಿಡಿಟಿ ಹೆಚ್ಚಿ ಜೀರ್ಣಕ್ರಿಯೆ ನಿಧಾನವಾಗುತ್ತದೆ.
ಇನ್ನು ಕೆಲವರು ಹಸಿವಾದಾಗ ಆಹಾರವನ್ನು ಸೇವಿಸುವ ಬದಲು ಚಹಾ ಕುಡಿಯುತ್ತಾರೆ. ಇದರಿಂದ ಹೃದಯದ ಬಡಿತ ಹೆಚ್ಚುತ್ತದೆ. ರಕ್ತದೊತ್ತಡ ಏರಿಕೆಯಾಗಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸುವ ಸಾಧ್ಯತೆ ಇದೆ. ಹೆಚ್ಚು ಚಹಾ ಕುಡಿಯುವವರು ಬಹುಬೇಗ ಸಂಧಿವಾತದ ಲಕ್ಷಣಗಳಿಗೆ ತುತ್ತಾಗುತ್ತಾರೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.




