ಆರೋಗ್ಯಲೈಫ್ ಸ್ಟೈಲ್

Black Salt : ಕಪ್ಪು ಉಪ್ಪು ಬಳಸಿ ನೋಡಿ

ಪವಿತ್ರಾ ಶೆಟ್ಟಿ

ಕಪ್ಪು ಉಪ್ಪು ಅಡುಗೆ ಮನೆಯಲ್ಲಿ ಬಳಕೆಯಾಗುವುದು ಕಡಿಮೆ. ಆದರೆ ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಕಪ್ಪು ಉಪ್ಪನ್ನು ಮಿತಪ್ರಮಾಣದಲ್ಲಿ ಬಳಸುವುದು ಮುಖ್ಯ. ಏಕೆಂದರೆ ಇದು ರಕ್ತದೊತ್ತಡವನ್ನು ಬಹುಬೇಗ ಏರಿಸುತ್ತದೆ. ಉಪ್ಪಿನಲ್ಲಿ ಕಂಡುಬರುವ ಸೋಡಿಯಂ ಅಂಶ ಹೃದಯದ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಅದೇ ರೀತಿ ಕಪ್ಪು ಉಪ್ಪಿನ ಸೇವನೆಯಿಂದ ಹಲವು ಲಾಭಗಳಿವೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ತಕ್ಷಣ ದೂರಮಾಡುತ್ತದೆ. ಎದೆಯುರಿ, ಹೊಟ್ಟೆ ಉಬ್ಬರದಂಥ ಸಮಸ್ಯೆಗಳು ಬಹುಬೇಗ ದೂರವಾಗುತ್ತವೆ. ಕೈಕಾಲು ಸೆಳೆತ ಬರದಂತೆಯೂ ಇದು ನೋಡಿಕೊಳ್ಳುತ್ತದೆ.

ಕಪ್ಪು ಉಪ್ಪಿನ ಸೇವನೆಯಿಂದ ದೇಹದಲ್ಲಿ ಪದೇ ಪದೇ ನೀರು ತುಂಬಿ ಕಾಲು ಬಾವು ಬರುವುದನ್ನು ತಪ್ಪಿಸಬಹುದು. ಮೂತ್ರದ ಮೂಲಕ ಮತ್ತು ಬೆವರಿನ ಮೂಲಕ ಹೆಚ್ಚಿನ ನೀರಿನ ಪ್ರಮಾಣ ಹೊರಹರಿದು ದೇಹ ನಿರಾಳವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button