ಆಹಾರಲೈಫ್ ಸ್ಟೈಲ್

Cylinder: ಗ್ಯಾಸ್ ಸಿಲಿಂಡರ್ ಬಗ್ಗೆ ನಿಮಗೆಷ್ಟು ತಿಳಿದಿದೆ..?

ಪವಿತ್ರಾ ಶೆಟ್ಟಿ

ಕಾಲ ಬದಲಾದಂತೆ ಬಹುತೇಕ ಎಲ್ಲ ವರ್ಗದ ಜನರ ಅಡುಗೆಮನೆಗೆ ಗ್ಯಾಸ್ ಸಿಲಿಂಡರ್ ಆಗಮಿಸಿದೆ. ಇದರ ಕಾಳಜಿ ಕುರಿತು ಹೆಚ್ಚಿನ ಮಂದಿ ತಿಳಿದಿದ್ದರೂ ಕೆಲವೊಮ್ಮೆ ಮಾಡುವ ಸಣ್ಣಪುಟ್ಟ ತಪ್ಪುಗಳು ಅವಾಂತರ ಸೃಷ್ಟಿಸುತ್ತದೆ. ಅವುಗಳ ಬಗ್ಗೆ ತಿಳಿಯೋಣ.

ಸಿಲಿಂಡರ್ ಕೊಳ್ಳುವ ವೇಳೆ ಕಂಪನಿಯ ಸೀಲ್ ಹಾಗೂ ಕ್ಯಾಪ್ ಸರಿಯಾಗಿ ಕುಳಿತಿದೆಯಾ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಅದೇ ರೀತಿ ಸಿಲಿಂಡರ್ ನಲ್ಲಿ ಇರುವ ದಿನಾಂಕವನ್ನು ಕೂಡ ಗಮನಿಸಿ. ಮುಚ್ಚಳ ತೆಗೆದರೆ ಅಥವಾ ದಿನಾಂಕ ಮುಗಿದಿದ್ದರೆ ಗ್ಯಾಸ್ ಸಿಲಿಂಡರನ್ನು ಹಿಂದಿರುಗಿಸಿ.

ಇನ್ನು ಗ್ಯಾಸ್ ನಿರ್ವಹಣೆ ವೇಳೆಯೂ ನೀವು ಕೆಲವು ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ ಮೇಲಿನಿಂದ ಕೆಳಕ್ಕೆ ಬೀಳದಂತೆ ನೋಡಿಕೊಳ್ಳಿ. ಸಿಲಿಂಡರ್ ಇಟ್ಟುಕೊಂಡಿರುವ ಕೋಣೆಯಲ್ಲಿ ಸಾಕಷ್ಟು ಬೆಳಕು ಗಾಳಿ ಆಡುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಿ. ಬಳಸದೆ ಇರುವ ವೇಳೆ ಇದನ್ನು ಆಫ್ ಮಾಡಿ. ಸಿಲಿಂಡರ್ ಆಸುಪಾಸಿನಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಇಡಬೇಡಿ. ರೆಗ್ಯುಲೇಟರ್ ಹಾಗೂ ಟ್ಯೂಬನ್ನು ಕನಿಷ್ಠ ಮೂರರಿಂದ ಆರು ತಿಂಗಳಿಗೊಮ್ಮೆ ಪರಿಶೀಲಿಸುತ್ತಿರಿ

Related Articles

Leave a Reply

Your email address will not be published. Required fields are marked *

Back to top button