ದೇಹ ತೂಕ ಕಡಿಮೆ ಮಾಡುವ ಹಣ್ಣುಗಳಿವು..!

ಪವಿತ್ರಾ ಶೆಟ್ಟಿ
ದೇಹದ ತೂಕ ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಿ ಸೋತಿದ್ದೀರಾ, ಈ ಬಾರಿ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಿ ನಿಮ್ಮ ತೂಕ ಇಳಿಸಿಕೊಳ್ಳುವ ವಿಧಾನ ತಿಳಿಸುತ್ತೇವೆ ಕೇಳಿ.
ಹಣ್ಣುಗಳ ಪೈಕಿ ಅವಕಾಡೊವನ್ನು ಸೇವಿಸುವುದರಿಂದ ಆರೋಗ್ಯಕಾರಿ ಕೊಬ್ಬು ಮಾತ್ರ ನಿಮ್ಮ ದೇಹಕ್ಕೆ ದೊರೆಯುತ್ತದೆ. ಇದು ನಾರಿನಂಶ ಮತ್ತು ನೀರಿನಂಶವನ್ನು ಸಮಪ್ರಮಾಣದಲ್ಲಿ ಹೊಂದಿದ್ದು ದೇಹ ತೂಕ ಇಳಿಸಲು ನೆರವಾಗುತ್ತದೆ.
ಇನ್ನು ನೀರಿನಂಶ ಸಾಕಷ್ಟಿರುವ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಕಡಿಮೆ ಪ್ರಮಾಣದ ಕ್ಯಾಲೊರಿಗಳು ಲಭ್ಯವಾಗುತ್ತವೆ. ಇದು ಹಸಿವೆ ಕಡಿಮೆ ಮಾಡುತ್ತವೆ. ಮತ್ತು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ.
ಪೇರಳೆ ಹಣ್ಣು ಮಧುಮೇಹಿಗಳಿಗೆ ಮತ್ತು ಅಸ್ತಮಾ ರೋಗಿಗಳಿಗೆ ಹೇಳಿ ಮಾಡಿಸಿದ್ದು. ಇದರ ಸೇವನೆಯಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕಡಿಮೆ ಕ್ಯಾಲೊರಿ ಹೊಂದಿರುವ ಕಿತ್ತಳೆ ಹಣ್ಣು ವಿಟಮಿನ್ ಸಿಯನ್ನು ಹೊಂದಿದ್ದು ಇದು ಚೀರ್ಣಕ್ರಿಯೆಯನ್ನು ಚುರುಕುಗೊಳಿಸಿ ದೇಹ ತೂಕವನ್ನು ಬಹುಬೇಗ ಇಳಿಸುತ್ತದೆ.




