ಆಹಾರಲೈಫ್ ಸ್ಟೈಲ್

ಸುಲಭ ವಿಧಾನದಲ್ಲಿ ತಯಾರು ಮಾಡಿ ಜೀರಾ ರೈಸ್

ಬೆಳಗ್ಗೆ ಎದ್ದು ತಕ್ಷಣ ಏನು ತಿಂಡಿ ಮಾಡಬೇಕು ಅಂತಾ ಯೋಚನೆ ಮಾಡುತ್ತಾರೆ. ಅದರಲ್ಲೂ ಆಫೀಸ್ ಹೋಗುವಂತ ಮಹಿಳೆಯರು ಸುಲಭವಾಗಿ ತಿಂಡಿ ರೆಡಿ ಮಾಡುವುದನ್ನು ಹುಡುಕುತ್ತಾರೆ. ಇಂತ ಸಮಯದಲ್ಲಿ ಇಲ್ಲೊಂದು ರುಚಿಕರ ಅಡುಗೆ ಮಾಡಿ ನೋಡಿ. ಅದು ಜೀರಾ ರೈಸ್. ವಿಭನ್ನವಾಗಿ ಪದಾರ್ಥಗಳನ್ನು ಹೆಚ್ಚು ಬಳಸಿ ಜೀರಾ ರೈಸ್ ಮಾಡಿದ್ರೆ ಎಂಥಾವರು ಇಷ್ಟ ಪಡುತ್ತಾರೆ. ಇಲ್ಲಿದೆ ಸುಲಭವಾದ ರೆಪಿಸಿ ಒಮ್ಮೆ ನೀವು ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು:
ಅಕ್ಕಿ- 1ಕಪ್
ತುಪ್ಪ- ಅರ್ಧ ಕಪ್
ಪಲಾವ್ ಎಲೆ- 2
ಚಕ್ಕೆ, ಲವಂಗ- ಸ್ವಲ್ಪ
ಜೀರಿಗೆ- 4 ಚಮಚ
ಹಸಿಮೆಣಸಿನಕಾಯಿ- 2
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿಸೊಪ್ಪು- ಸ್ವಲ್ಪ

ಮಾಡುವ ವಿಧಾನ:ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ಕುಕ್ಕರ್‌ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಹಾಕಿ ಸ್ವಲ್ಪ ಫ್ರೈ ಮಾಡಿ.ನಂತರ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೇರಿಸಿ ಬೇಯಿಸಿದರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧವಾಗುತ್ತದೆ

Spread the love

Related Articles

Leave a Reply

Your email address will not be published. Required fields are marked *

Back to top button