ಕೂದಲು ಉದುರುವ ಮುಖ್ಯ ಕಾರಣಗಳಿವು!

ಪವಿತ್ರಾ ಶೆಟ್ಟಿ
ತಲೆಯ ನೆತ್ತಿಯ ಭಾಗ ವಿಪರೀತ ತುರಿಸುತ್ತಿದೆಯೇ. ಈ ಭಾಗದ ತಲೆಕೂದಲು ಬಹುಬೇಗ ಉದುರುತ್ತಿದೆಯೇ. ಇದರ ಕಾರಣಗಳೇನಿರಬಹುದು. ನೆತ್ತಿಯ ಭಾಗದಲ್ಲಿ ಹೊಟ್ಟು ಹೆಚ್ಚುತ್ತಿರುವುದರಿಂದ ತಲೆ ಕೂದಲು ವಿಪರೀತ ಉದುರುತ್ತಿರಬಹುದು. ಅತಿಯಾದ ಬ್ಲೀಚಿಂಗ್ ಬಳಕೆಯಿಂದ ಕೂದಲು ಉದುರಬಹುದು. ಇದು ಕೂದಲಿಗೆ ಹಾನಿ ಉಂಟುಮಾಡುತ್ತದೆ. ನೈಸರ್ಗಿಕ ಶುಷ್ಕತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಅದನ್ನು ತಪ್ಪಿಸಲು ನೀವು ಅತಿಯಾದ ಬಿಸಿ ನೀರಿನ ಸ್ನಾನ ಮಾಡದಿರಿ.
ಕೂದಲಿನ ಹಲವು ವಿನ್ಯಾಸಗಳನ್ನು ಮಾಡಿಕೊಳ್ಳುವ ವೇಳೆ ಬಳಸುವ ಜೆಲ್ ಅಥವಾ ಇತರ ರಾಸಾಯನಿಕಗಳು ಕೂದಲಿನ ಉದುರುವಿಕೆಗೆ ಕಾರಣವಾಗಬಹುದು. ಕೂದಲನ್ನು ಬಿಗಿಯಾಗಿ ಎಳೆದು ಕಟ್ಟುವುದು, ಕೂದಲುದುರುವಿಕೆಗೆ ಕಾರಣವಾಗುತ್ತದೆ.
ಸೂರ್ಯನ ಕಿರಣಗಳು ನೇರವಾಗಿ ನೆತ್ತಿಯ ಮೇಲೆ ಬೀಳುವುದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಪದೇಪದೇ ತಲೆಸ್ನಾನ ಮಾಡುವುದು ಕೂದಲು ಉದುರಲು ಕಾರಣವಾಗಬಹುದು. ವಾರಕ್ಕೆ ಎರಡು ಬಾರಿ ತಲೆ ಕೂದಲು ತೊಳೆದುಕೊಂಡರೆ ಸಾಕು. ಉತ್ತಮ ಪೋಷಕಾಂಶಗಳ ಸೇವನೆಯಿಂದಲೂ ನೀವು ನೀಳ ಕೂದಲನ್ನು ಹೊಂದಬಹುದು.




