Breaking NewsLatestಮೈಸೂರುರಾಜ್ಯ

ನ್ಯಾಯಾಂಗ ನಿಂದನೆ; ವಿಚಾರಣೆಯಿಂದ ರೋಹಿಣಿ ಸಿಂಧೂರಿ ಹೆಸರು ಕೈಬಿಟ್ಟ ಹೈಕೋರ್ಟ್

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ತಳದಲ್ಲಿ ಇರುವ ಕುರುಬರಹಳ್ಳಿ ಭೂವಿವಾದಕ್ಕೆ ಸಂಬಂಧಿಸಿದ್ದ ಹೂಡಿದ್ದ ನ್ಯಾಯಾಂಗ ನಿಂದನೆ ವಿಚಾರಣಾ ಅರ್ಜಿಯಿಂದ ಹಿಂದಿನ ಇಲ್ಲಿ ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹೆಸರನ್ನು ಹೈಕೋರ್ಟ್ ಕೈಬಿಟ್ಟಿದೆ.

ತಮ್ಮ ಹೆಸರನ್ನು ನ್ಯಾಯಂಗ ನಿಂದನೆ ದಾವೆಯಿಂದ ಬಿಡುವಂತೆ ಕೋರಿದ್ದ ರೋಹಿಣಿ ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅವರ ಮನವಿಯನ್ನು ಮಾನ್ಯ ಮಾಡಿದೆ. ಶುಕ್ರವಾರ ರೋಹಿಣಿ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಭೂಮಾಲೀಕರಿಗೆ ಖಾತೆ ಮಾಡಿಕೊಡದಿದ್ದರೆ ಜೈಲಿಗೆ
ಇದೇ ವೇಳೆ ನ್ಯಾಯಾಲಯ ಹಾಲಿ ಮೈಸೂರು ಡಿಸಿ ಡಾ.ಬುಗಾದಿ ಗೌತಮ್ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಆ. 24ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಾಕೀತು ಮಾಡಿ, ಮೈಸೂರು ತಹಸೀಲ್ದಾರ್ ರಕ್ಷಿತ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಅರ್ಜಿದಾರರಿಗೆ ಯಾವುದೇ ರೀತಿಯ ಕಾರಣಗಳನ್ನು ಹೇಳದೆ ಆ.25ರೊಳಗೆ ಖಾತೆ ಮಾಡಿಕೊಡಬೇಕು. ಇಲ್ಲದಿದ್ದರೆ ಜೈಲಿಗೆ ಕಳುಹಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿತು.

Related Articles

Leave a Reply

Your email address will not be published. Required fields are marked *

Back to top button