ನಾಟಿವೈದ್ಯ
ಶುಂಠಿ ಮತ್ತು ನಿಂಬೆಯಿಂದ ಆಗುವ ಪ್ರಯೋಜನಗಳು

ಶುಂಠಿಯು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಣೆ ಮಾಡುತ್ತದೆ.
ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ವಾಕರಿಕೆ ಮತ್ತು ನೋವನ್ನು ಸಹ ನಿವಾರಿಸುತ್ತದೆ.
ಅಲ್ಲದೆ, ದೇಹದ ತೂಕವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆಯಲ್ಲದೇ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
- ಒಂದು ಲೋಟ ನೀರಿಗೆ ತಾಜಾ ಶುಂಠಿಯ ಚೂರುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ಜೇನುತುಪ್ಪವನ್ನು ನೀವು ಸೇರಿಸಿ ಕುಡಿಯಬಹುದು. ಈ ಶುಂಠಿ ಚಹಾವು ಕೆಮ್ಮನ್ನು ತಕ್ಷಣ ಹೊಡೆದೋಡಿಸಲು ಸಹಾಯ ಮಾಡುತ್ತದೆ.
- ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
- ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
- ಒಂದು ಚಮಚ ಜೇನುತುಪ್ಪಕ್ಕೆ ಅದರ ಕಾಲು ಭಾಗ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಗೆ ಪರಿಹಾರ ಕಾಣಬಹುದು.



