ಆಹಾರಲೈಫ್ ಸ್ಟೈಲ್
ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ವಿಧಾನ

ಇನ್ನೇನು ಬೇಸಿಗೆ ಹತ್ರ ಬರುತ್ತಿದೆ. ಈ ಸಮಯದಲ್ಲಿ ಎಲ್ಲ ಬಾಯರಿಕೆ ನೀಗಿಸಲು ತಂಪೂ ಪಾನೀಯಾ ಕಡೆ ಮೊರೆ ಹೋಗುತ್ತಾರೆ. ಇದ್ದರಿಂದ ಸಾಕಷ್ಟು ಆರೋಗ್ಯ ಹಾಳಾಗುತ್ತದೆ. ಹೀಗಾಗಿ ಮನೆಯಲ್ಲೇ ಜ್ಯೂಸ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಅದರಲ್ಲೂ ಲಸ್ಸಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇಲ್ಲಿದೆ ಈ ಲಸ್ಸಿ ತಯಾರು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:
ಕಪ್ಪು ದ್ರಾಕ್ಷಿ- ಕಾಲು ಕೆ.ಜಿ
ಮೊಸರು- 1 ಕಪ್
ಹಾಲು- 1 ಲೋಟ
ಸಕ್ಕರೆ- 4 ಚಮಚ

ಮಾಡುವ ವಿಧಾನ:
ಕಪ್ಪು ದ್ರಾಕ್ಷಿಗಳನ್ನು 2-3 ಬಾರಿ ಚೆನ್ನಾಗಿ ತೊಳೆಯಿರಿ.ಮೊಸರು, ಹಾಲು, ಸಕ್ಕರೆಯನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ ಈಗ ಶೋಧಿಸಿಕೊಳ್ಳಬೇಕು, ನೀರು ಸೇರಿಸುವ ಅಗತ್ಯವಿಲ್ಲ.ಒಳ್ಳೆಯ ಸ್ವಾದ, ಹಿತವಾದ ಬಣ್ಣ, ಹಾಗೂ ಪೌಷ್ಟಿಕವಾದ ಕಪ್ಪು ದ್ರಾಕ್ಷಿಯ ಲಸ್ಸಿ ಕುಡಿಯಲು ಸಿದ್ಧ. ಗ್ಲಾಸ್‍ಗೆ ಹಾಕಿ ಸರ್ವ್ ಮಾಡುವಾಗ ಬೇಕೆಂದಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಿ.




