ರುಚಿ ರುಚಿಯಾದ ಮಾವಿನ ಹಣ್ಣಿನ ಕೇಸರಿಬಾತ್

ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಮಾರ್ಕೇಟ್ ನಲ್ಲಿ ತರಹೇವಾರಿ ಹಣ್ಣುಗಳ ರಾಜ ಮಾವಿನ ಹಣ್ಣುಗಳ ಕಲರವ ಶುರುವಾಗಿದೆ. ಮಾವಿನ ಹಣ್ಣಿನಿಂದ ಸಾಕಷ್ಟು ಖಾದ್ಯಗಳನ್ನ ತಯಾರಿಸಬಹುದು. ಇವತ್ತು ಮಾವಿನ ಹಣ್ಣಿನ ಕೇಸರಿಬಾತ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತಿವಿ ನೋಡಿ.
ಬೇಕಾದ ಪದಾರ್ಥಗಳು
ಮಾವಿನ ಹಣ್ಣು 3
ರವೆ 1 ಗ್ಲಾಸ್
ಸಕ್ಕರೆ 1 ಗ್ಲಾಸ್
ಹಾಲು 1 ಗ್ಲಾಸ್
ದ್ರಾಕ್ಷಿ, ಗೋಡಂಬಿ
ತುಪ್ಪ 1 ಕಪ್
ಮಾಡುವ ವಿಧಾನ: ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಪ್ಯಾನ್ ಗೆ ಸ್ಪಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಕಾದ ಹಾಲಿಗೆ ಮಾವಿನ ಹಣ್ಣಿನ ರಸ ಮಿಶ್ರಣ ಮಾಡಿ ಮತ್ತೊಮ್ಮೆ ಕಾಯಿಸಬೇಕು. ಹಾಲು ಹಾಗೂ ಮಾವಿನ ಹಣ್ಣಿನ ರಸ ಸಂಪೂರ್ಣವಾಗಿ ಮಿಕ್ಸ್ ಆದ ಬಳಿಕ ಹುರಿದುಕೊಂಡಿರುವ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಮಾವಿನ ಹಣ್ಣಿನ ಕೇಸರಿಬಾತ್ ಗೆ ತುಪ್ಪ ಹಾಕಿ ಸರ್ವ್ ಮಾಡಿ.




