ಆಹಾರಲೈಫ್ ಸ್ಟೈಲ್
ಮಕ್ಕಳ ಮೆಚ್ಚಿನ ಮ್ಯಾಗಿ ಮಸಾಲೆ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು
ಜೀರಿಗೆ- 3 ಚಮಚ
ಮೆಂತ್ಯೆ ಕಾಳು ಅರ್ಧ ಚಮಚ
ಸೋಂಪು- 1 ಚಮಚ
ಪಲಾವ್ ಎಲೆ- 3
ಲವಂಗ- 6
ಚಕ್ಕೆ – 1
ಏಲಕ್ಕಿ- 5
ಅಚ್ಚ ಖಾರದ ಪುಡಿ- 1 ಚಮಚ
ಅರಿಶಿನದ ಪುಡಿ- ಕಾಲು ಚಮಚ
ಶುಂಠಿ, ಬೆಳ್ಳುಳ್ಳಿ ಪುಡಿ- 1 1/ 2 ಚಮಚ
ಈರುಳ್ಳಿ ಪುಡಿ – 1 ಚಮಚ
ಕಾಳು ಮೆಣಸು- ಅರ್ಧ ಚಮಚ
ಆಮ್ ಚೂರ್ ಪುಡಿ- 1 ಚಮಚ
ಸಕ್ಕರೆ – 1 1/2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಕಾರ್ನ್ ಫ್ಲೋರ್- 2 ಚಮಚ
ಮಾಡುವ ವಿಧಾನ: ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ದನಿಯಾ, ಜೀರಿಗೆ, ಸೋಂಪು, ಮೆಂತ್ಯೆ ಕಾಳು, ಪಲಾವ್ ಎಲೆ, ಚಕ್ಕೆ, ಏಲಕ್ಕಿ, ಲವಂಗ, ಕಾಳು ಮೆಣಸು ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹುರಿದ ಎಲ್ಲಾ ಪದಾರ್ಥಗಳನ್ನೂ ಹಾಕಿ ಅಚ್ಚ ಖಾರದ ಪುಡಿ, ಅರಿಶಿನದ ಪುಡಿ, ಶುಂಠಿ, ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಆಮ್ ಚೂರ್ ಪುಡಿ, ಸಕ್ಕರೆ, ಉಪ್ಪು, ಕಾರ್ನ್ ಫ್ಲೋರ್ ಎಲ್ಲವನ್ನೂ ಹಾಕಿ ಪುಡಿ ಮಾಡಿಕೊಂಡರೆ ಮ್ಯಾಗಿ ಮಸಾಲೆ ಪುಡಿ ಸಿದ್ಧ.




