ಆರೋಗ್ಯಲೈಫ್ ಸ್ಟೈಲ್

ಬೊಜ್ಜು ಕರಗಿಸಲು ಈ ಟಿಪ್ಸ್ ಫಾಲೋ ಮಾಡಿ

ಸಾಮಾನ್ಯವಾಗಿ ಇಂದಿನ ಜೀವನ ಶೈಲಿಯಿಂದ ಬೊಜ್ಜು ತುಂಬಿಕೊಳ್ಳುವುದು ಹೆಚ್ಚಾಗಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಅದನ್ನು ಕರಗಿಸಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೂ ಕೂಡ ಕಡಿಮೆ ಆಗೋಲ್ಲ. ಹೀಗಿರುವಾಗ ವ್ಯಾಯಮ ಮತ್ತು ಯೋಗ ಕಡೆ ಹೆಚ್ಚು ಗಮನಹರಿಸುತ್ತಾರೆ. ಅದು ಕೆಲಸ ಒತ್ತಡದಿಂದ ಸ್ವಲ್ಪ ದಿನ ಮಾಡುವುದು ಬಿಡುವುದು ಮಾಡುತ್ತಾರೆ. ಹೀಗೆ ಮಾಡಿದಾಗಲೇ ಮತ್ತಷ್ಟು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ನಿಮಗೆ ಯೋಗ, ವ್ಯಾಯಮ ಮಾಡುವುದಕ್ಕೆ ಆಗೋಲ್ಲ, ಇಲ್ಲಿದೆ ಕೆಲ ಟಿಪ್ಸ್ ಗಳು ಇದೆ.

ಇಂದಿನ ದಿನದಲ್ಲಿ ಉದ್ಯೋಗಗಳು, ಇತರೆ ಕೆಲಸಗಳಿಂದ ಒತ್ತಡ ಹೆಚ್ಚಿಸುತ್ತದೆ. ಹೀಗಿರುವಾಗ ಕೆಲವರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದಕ್ಕೆ ಆಗುವುದಿಲ್ಲ. ಇದರಿಂದ ಬೊಜ್ಜು ಹೆಚ್ಚುತ್ತದೆ. ಹೀಗಾಗಿ ಊಟವನ್ನು ಸರಿಯಾದ ಟೈಮ್ ಗೆ ಮಾಡಬೇಕು.

ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗುವುದು, ಹಾಗಾಗಿ ಬಹಳ ಬೇಗ ಹಸಿವಾಗುವುದಿಲ್ಲ.ಮಧ್ಯಾಹ್ನ ಹೆಚ್ಚು ಪ್ರೋಟೀನ್‌ವುಳ್ಳ ಆಹಾರ ಸೇವಿಸುವುದರಿಂದ ಹಸಿವು ಕಡಿಮೆಯಾಗಿ, ಆನಂತರ ಸೇವಿಸುವ ಊಟದಲ್ಲಿ ಸೇವಿಸುವ ಕ್ಯಾಲೊರಿಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ತಿಳಿದು ಬಂದಿದೆ.

ಪ್ರೋಬಯಾಟಿಕ್ಸ್ ಎಂದರೆ ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಪ್ರಯೋಜನಕಾರಿ ಬ್ಯಾಕ್ಟಿರೀಯಗಳು. ಇವು ಕರುಳು ಮತ್ತು ಮೆದುಳಿನಕ್ರಿಯೆಗೆ ಸಂಬಂಧಿಸಿದ್ದು, ತೂಕ, ಫ್ಯಾಟ್ ಮಾಸ್ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.

ದೇಹದ ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಸರಿಯಾದ ನಿದ್ರೆ ಇಲ್ಲದಿದ್ದರೆ, ಚಯಾಪಚಯ ಕ್ರಿಯೆಗೆ ತೊಂದರೆ ಆಗುತ್ತದೆ.ಕೆಲವು ಪ್ರಮುಖ ಹಾರ್ಮೋನ್‍ಗಳಿಗೆ ತೊಂದರೆಯಾಗುತ್ತದೆ.

ಹೂಕೋಸು ಮತ್ತು ಕೋಸುಗಡ್ಡೆಯಂತಹ ತರಕಾರಿಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಅವು ಇತರ ತರಕಾರಿಗಳಿಗಿಂತ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ಇದು ದೀರ್ಘಕಾಲದವರೆಗೆ ಹಸಿವಿನಿಂದ ಇರಲು ಸಹಾಯ ಮಾಡುತ್ತದೆ.ಬೆಳಿಗ್ಗೆ ಚಹಾ ಅಥವಾ ಕಾಫಿಯ ಬದಲಿಗೆ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು

Related Articles

Leave a Reply

Your email address will not be published. Required fields are marked *

Back to top button