ಆರೋಗ್ಯಲೈಫ್ ಸ್ಟೈಲ್

ಸಕ್ಕರೆ ಬೆರೆಸಿದ ಕಾಫಿ ಕುಡಿಯುವ ಮುನ್ನ…

ಪವಿತ್ರಾ ಶೆಟ್ಟಿ

ಬೆಳಿಗ್ಗೆ ಎದ್ದಾಕ್ಷಣ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಕಾಫಿಗೆ ಸಕ್ಕರೆ ಬೆರೆಸುವ ಬದಲು ಒಂದು ಚಮಚ ನಿಂಬೆರಸ ಬೆರೆಸಿ ಕುಡಿದು ನೋಡಿ. ಅದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?

ಕಾಫಿಗೆ ಸಕ್ಕರೆ ಬದಲು ನಿಂಬೆರಸ ಹಾಕಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಚೈತನ್ಯ ದೊರೆಯುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರೆ ನೀವು ಇದನ್ನು ಕುಡಿಯುವುದು ಸೂಕ್ತ.

ಕಾಫಿಯಲ್ಲಿರುವ ನೈಸರ್ಗಿಕ ಅಂಶಗಳು ನಿಮ್ಮ ದೇಹಕ್ಕೆ ಇದರಿಂದ ಸಹಜವಾಗಿಯೇ ದೊರೆಯುತ್ತದೆ. ಮೆಟಾಬಾಲಿಕ್ ಕ್ರಿಯೆ ಸರಾಗವಾಗಿ ನಡೆದು ಕ್ಯಾಲೊರಿ ಕರಗಲು ಅವಕಾಶ ಕಲ್ಪಿಸುತ್ತದೆ. ಕಾರ್ಬೋ ಹೈಡ್ರೇಟ್ ಗಳು ಸರಿಯಾಗಿ ಹೀರುಕೊಳ್ಳುವಂತೆಯೂ ಆಗುತ್ತದೆ.

ಕಾಫಿಗೆ ಬೆರೆಸಿದ ನಿಂಬೆ ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ದೇಹದ ಒಳಗಿರುವ ವಿಷಕಾರಿ ಅಂಶಗಳನ್ನು ಸಂಪೂರ್ಣವಾಗಿ ಹೊರಹಾಕುತ್ತದೆ. ಇದರಿಂದ ಬೊಜ್ಜು ರಹಿತ ದೇಹ ನಿಮ್ಮದಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button