ಆರೋಗ್ಯಲೈಫ್ ಸ್ಟೈಲ್
ಕಿವಿಯಲ್ಲಿ ಕೂದಲು ಇರುವುದು ಸಹಜವೇ?

ಪವಿತ್ರಾ ಶೆಟ್ಟಿ
ಕೆಲವರಿಗೆ ಕಿವಿಯಲ್ಲಿ ಕೂದಲು ಬೆಳೆಯುತ್ತದೆ. ಪುರುಷರಲ್ಲಿ, ಅದರಲ್ಲೂ ವಯಸ್ಸಾದವರಲ್ಲಿ ಕಿವಿಯ ಮೇಲೆ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯ. ಇನ್ನು ಕೆಲವರಿಗೆ ಹಾರ್ಮೋನ್ ಬದಲಾವಣೆ ಕಾರಣದಿಂದ ಕಿವಿಯ ಮೇಲೆ ಕೂದಲು ಹುಟ್ಟುತ್ತವೆ.
ಸಾಮಾನ್ಯವಾಗಿ ಇವು ದೇಹದ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅದೇ ರೀತಿ ಇದು ಯಾವುದೋ ಗಂಭೀರ ಸಮಸ್ಯೆಯ ಲಕ್ಷಣವೂ ಅಲ್ಲ. ಹಾಗಾಗಿ ಇದರ ಬಗ್ಗೆ ಅನಾವಶ್ಯಕ ಭಯ ಬೇಕಿಲ್ಲ. ಕೆಲವೊಮ್ಮೆ ಇದು ಅನುವಂಶಿಕವಾಗಿಯು ಕಾಣಿಸಿಕೊಳ್ಳುವುದುಂಟು.
ಕೆಲವರು ಕೂದಲನ್ನು ನಿತ್ಯ ತೆಗೆಯುತ್ತಾರೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಪ್ಲಕ್ಕರ್, ಶೇವಿಂಗ್ ಮೂಲಕ ಇದನ್ನು ತೆಗೆಯಬಹುದು. ಹೇರ್ ರಿಮೂವರ್ ಕ್ರೀಮ್ ಅನ್ನು ಬಳಸಬಹುದು. ಆದರೆ ಈ ಕ್ರೀಮ್ ಗಳು ಕಿವಿಯ ಒಳಗೆ ಹೋಗದಂತೆ ಎಚ್ಚರ ವಹಿಸಬೇಕು.




