Latestಇತರ ಕ್ರೀಡೆಕ್ರೀಡೆ
ಯುಎಸ್ ಓಪನ್: ಜಯದ ಖಾತೆ ತೆರೆದ ಒಸಾಕ

ನ್ಯೂಯಾರ್ಕ್: ಒತ್ತಡದ ಹಿನ್ನೆಲೆಯಲ್ಲಿ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ನಲ್ಲಿ ಸ್ಪರ್ಧಿಸುತ್ತಿರುವ ಹಾಲಿ ಚಾಂಪಿಯನ್ ನವೊಮಿ ಒಸಾಕ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ನ ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಮೂರನೇ ಸೀಡ್ ಆಟಗಾರ್ತಿ ಒಸಾಕ ಚೆಕ್ ಗಣರಾಜ್ಯದ 87 ನೇ ರಾಂಕ್ ಆಟಗಾರ್ತಿ ಮೇರಿ ಬೌಸ್ಕೊವಾ ವಿರುದ್ಧ 6-4, 6-1 ಅಂತರದಲ್ಲಿ ನೇರ ಸೆಟ್ ಗಳ ಜಯ ದಾಖಲಿಸಿದರು.
ಮುಂದಿನ ಸುತ್ತಿನಲ್ಲಿ ಒಸಾಕ ಸರ್ಬಿಯಾದ ಒಲ್ಗಾ ಡೆನಿಲೊವಿಕ್ ವಿರುದ್ಧ ಸೆಣಸಲಿದ್ದಾರೆ.
ಮಾಜಿ ನಂ1. ಸಿಮೊನಾ ಹ್ಯಾಲೆಪ್, ಗಾರ್ಬೈನ್ ಮುಗರುಜಾ, ಎಲಿನಾ ಸ್ವಿಟೋಲಿನಾ, ವಿಕ್ಟೋರಿಯ ಅಜಾರೆಂಕಾ ಮತ್ತು ಏಂಜಲಿಕ್ ಕೆರ್ಬರ್ ಎರಡನೇ ಸುತ್ತು ತಲುಪಿದ್ದಾರೆ.
ಪುರುಷರ ವಿಭಾಗದಲ್ಲಿ ಆ್ಯಂಡಿ ಮರ್ರೆ ಗ್ರೀಸ್ ನ ಸ್ಟೇಫಾನೊಸ್ ಸಿಸಿಪಾಸ್ ವಿರುದ್ಧ 6-2, 6-7, 6-3, 3-6, 4-6 ಅಂತರದಲ್ಲಿ ಪರಾಭವಗೊಂಡಿದ್ದಾರೆ.



