ಆರೋಗ್ಯಲೈಫ್ ಸ್ಟೈಲ್

ಶೀತ, ಜ್ವರ ಬಂದಾಗ ನಿಮ್ಮ ಮಕ್ಕಳಿಗೆ ಇದನ್ನು ನೀಡುವುದನ್ನು ತಪ್ಪಿಸಿ

ಪವಿತ್ರಾ ಶೆಟ್ಟಿ

ತಂಪಾದ ವಾತಾವರಣದಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಮಳೆಗಾಲದಲ್ಲಿ ನಿಮ್ಮ ಮಕ್ಕಳು ಹೆಚ್ಚು ಸೋಂಕು ಮತ್ತು ಜ್ವರಕ್ಕೆ ಒಳಗಾಗುತ್ತಾರೆ. ಹಾಗಾಗಿ ಅವರಿಗೆ ಉತ್ತಮ ಆಹಾರ ನೀಡಿ. ಇದರಿಂದ ಕಾಯಿಲೆ ಬೇಗ ಗುಣವಾಗುತ್ತದೆ. ಆದರೆ ಮಕ್ಕಳಿಗೆ ಶೀತ, ಜ್ವರವಿದ್ದಾಗ ಈ ಆಹಾರ ನೀಡಬೇಡಿ.

ಮಾಂಸ : ಜ್ವರವಿದ್ದಾಗ ಮಕ್ಕಳಿಗೆ ಮಾಂಸವನ್ನು ನೀಡುವುದನ್ನು ತಪ್ಪಿಸಿ. ಇದು ಗಂಟಲಿನಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ. ಮಾಂಸವು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿದೆ. ಇದು ಲೋಳೆಯ ಉತ್ಪಾದನೆಗೆ ಕಾರಣವಾಗಿ ಗಂಟಲಿನ ಸಮಸ್ಯೆ ಕಾಡುತ್ತದೆ.

ಸಕ್ಕರೆ ಆಹಾರಗಳು : ಮಕ್ಕಳು ಸಿಹಿ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಹೆಚ್ಚು ಸಕ್ಕರೆ ಸೇವನೆ ಬಿಳಿ ರಕ್ತದ ಕಣಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇದರಿಂದ ಮಕ್ಕಳು ವೈರಲ್ ಸೋಂಕಿಗೆ ಒಳಗಾಗುತ್ತಾರೆ.

ಹುರಿದ ಆಹಾರ : ಹುರಿದ ಆಹಾರಗಳು ಕೊಬ್ಬು ಮತ್ತು ಎಣ್ಣೆ ಯಂಶದಿಂದ ಕೂಡಿರುತ್ತದೆ. ಇದು ಮಕ್ಕಳಿಗೆ ಹಾನಿಕಾರಕವಾಗಿದೆ. ಇದು ದಪ್ಪ ಲೋಳೆಯ ಸ್ರವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಮಕ್ಕಳಿಗೆ ಹುರಿದ, ಎಣ್ಣೆಯುಕ್ತ ಆಹಾರ ನೀಡಬೇಡಿ.

ಹಾಲಿನ ಉತ್ಪನ್ನಗಳು : ಮಕ್ಕಳಿಗೆ ತಂಪಾದ ವಾತಾವರಣವಿದ್ದಾಗ ಹಾಲಿನ ಉತ್ಪನ್ನಗಳನ್ನು ನೀಡಬೇಡಿ. ಡೈರಿ ಉತ್ಪನ್ನಗಳು ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಮಕ್ಕಳಿಗೆ ಹಾನಿಕಾರಕವಾಗಿದೆ. ಹಾಗಾಗಿ ಮಕ್ಕಳಿಗೆ ಇದನ್ನು ನೀಡಬೇಡಿ.

Spread the love

Related Articles

Leave a Reply

Your email address will not be published. Required fields are marked *

Back to top button