ಆರೋಗ್ಯಲೈಫ್ ಸ್ಟೈಲ್

ರಾತ್ರಿಯ ಉತ್ತಮ ನಿದ್ರೆಗಾಗಿ…

ಪವಿತ್ರಾ ಶೆಟ್ಟಿ

ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೇಕಾದರೆ ಉತ್ತಮ ನಿದ್ದೆ ಪಡೆಯುವುದು ಬಹಳ ಮುಖ್ಯ. ಆರೋಗ್ಯವಂತ ದೇಹಕ್ಕೆ ದಿನದಲ್ಲಿ 6 ರಿಂದ 8 ಗಂಟೆ ನಿದ್ರೆ ಬೇಕು. ಸರಿಯಾಗಿ ನಿದ್ದೆ ಪಡೆಯಲು ಈ ಕೆಲವು ಅಭ್ಯಾಸಗಳನ್ನು ಅನುಸರಿಸಿ ನೋಡಿ.

ಸಂಜೆ ನಾಲ್ಕರ ಬಳಿಕ ಚಹಾ ಕಾಫಿ ಕುಡಿಯದಿರಿ. ಬೆಚ್ಚಗಿನ ಹಾಲು, ಕೊತ್ತಂಬರಿ ಕಷಾಯ ಸೇವಿಸಿ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿದು ಮಲಗಿ. ಹಗಲಿನ ವೇಳೆ ಮಲಗುವುದನ್ನು ತಪ್ಪಿಸಿ. ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ. ಬೆಳಿಗ್ಗೆ ಏಳುವ ಹಾಗೂ ರಾತ್ರಿ ಮಲಗುವ ಸಮಯವನ್ನು ನಿಗದಿಪಡಿಸಿಕೊಳ್ಳಿ.

ಮಲಗುವ ಮುನ್ನ ಕೆಲಸ ಸಂಪೂರ್ಣ ಮುಗಿದ ಬಳಿಕ ಸಂಗೀತ ಕೇಳಿ, ನಿಮಗಿಷ್ಟದ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಿ. ಮಲಗುವ ಮುನ್ನ ಆಲ್ಕೋಹಾಲ್ ಸೇವನೆ ಬಿಟ್ಟುಬಿಡಿ.
ಮಲಗುವ ಕೊಠಡಿ ನಿದ್ದೆ ಮಾಡಲು ಅನುಕೂಲವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಲಗುವ ಮುನ್ನ ಹೊಟ್ಟೆ ತುಂಬಾ ಊಟ ಮಾಡಿದಿರಿ. ರಾತ್ರಿಯ ಊಟ ಕೊನೆಗೂ ಕನಿಷ್ಠ 2 ಗಂಟೆ ಅಂತರವಿರಲಿ

Spread the love

Related Articles

Leave a Reply

Your email address will not be published. Required fields are marked *

Back to top button