ಆರೋಗ್ಯಆಹಾರಲೈಫ್ ಸ್ಟೈಲ್

ಹಲ್ಲು ನೋವಿಗೆ ಮನೆ ಮದ್ದು

ಪವಿತ್ರಾ ಶೆಟ್ಟಿ

ಹಲ್ಲು ನೋವು ಸಮಸ್ಯೆ ಕಾಣಿಸಿಕೊಂಡರೆ ಅದು ಬಹುಬೇಗ ಕಡಿಮೆಯಾಗುವುದಿಲ್ಲ. ಅದು ನಿಮಗೆ ತಲೆನೋವನ್ನು ತಂದೊಡ್ಡುತ್ತದೆ. ಕೆಲವು ಮನೆ ಮದ್ದುಗಳ ಮೂಲಕ ಹಲ್ಲುನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಅವುಗಳ ಪೈಕಿ ಲವಂಗವೂ ಒಂದು. ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಂಡರೆ ಕೆಲವೇ ಹೊತ್ತಿನಲ್ಲಿ ಹಲ್ಲು ನೋವು ಕಡಿಮೆಯಾಗುತ್ತದೆ. ಲವಂಗ ಎಣ್ಣೆಯನ್ನು ಬಿಡುಗಡೆ ಮಾಡುವುದರಿಂದ ಅಲ್ಲಿನ ನರಗಳು ನಿಶ್ಚಲ ಗೊಂಡು ನೋವು ಕಡಿಮೆಯಾಗುತ್ತದೆ.

ಉಪ್ಪು ನೀರಿನಲ್ಲಿ ಪದೇಪದೇ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ. ಐಸ್ ಪ್ಯಾಕ್ ಇಲ್ಲವೇ ಕೋಲ್ಡ್ ಕಂಪ್ರೆಸ್ ಮಾಡುವುದರಿಂದಲೂ ಹಲ್ಲುನೋವನ್ನು ಕಡಿಮೆ ಮಾಡಬಹುದು. ಬೆಳ್ಳುಳ್ಳಿ ಪೇಸ್ಟ್ ಇಲ್ಲವೇ ಬೆಳ್ಳುಳ್ಳಿ ಎಣ್ಣೆಯನ್ನು ನೋವಿರುವ ಹಲ್ಲಿನ ಭಾಗಕ್ಕೆ ಹಚ್ಚುವುದರಿಂದ ನೋವು ಬಹುಬೇಗ ಕಡಿಮೆಯಾಗುತ್ತದೆ. ಪುದಿನ ಚಹ ಕುಡಿಯುವುದರಿಂದಲೂ ನೀವು ಇದೇ ಲಾಭವನ್ನು ಪಡೆಯಬಹುದು.

ಅರಿಶಿನಕ್ಕೂ ನೋವು ನಿವಾರಣೆ ಮಾಡುವ ಗುಣವಿದೆ. ಅರಿಶಿನದ ಪೇಸ್ಟ್ ತಯಾರಿಸಿ ನೋವಿರುವ ಜಾಗಕ್ಕೆ ಇಟ್ಟುಕೊಂಡರೆ, ಬ್ಯಾಕ್ಟೀರಿಯಗಳು ದೂರವಾಗಿ ಸೋಂಕು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ತಪ್ಪುತ್ತದೆ.

Related Articles

Leave a Reply

Your email address will not be published. Required fields are marked *

Back to top button