ಆರೋಗ್ಯಲೈಫ್ ಸ್ಟೈಲ್

ಸೊಳ್ಳೆ ಕಡಿದರೆ ಹೀಗೆ ಮಾಡಿ

ಪವಿತ್ರಾ ಶೆಟ್ಟಿ

ಸೊಳ್ಳೆ ಕಚ್ಚಿದ ಜಾಗ ಕೆಂಪಾಗಿ ಭಾರಿ ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅಲರ್ಜಿ ರೂಪಕ್ಕೆ ತಿರುಗಿ ಹಲವು ಸಮಸ್ಯೆ ತಂದೊಡ್ಡುತ್ತದೆ. ಇದರ ನಿವಾರಣೆಗೆ ಏನು ಮಾಡಬಹುದು ಎಂದಿರಾ?

ಸೊಳ್ಳೆ ಕಚ್ಚಿದ ಜಾಗ ವಿಪರೀತ ತುರಿಸುತ್ತಿದ್ದರೆ ಆ ಜಾಗಕ್ಕೆ ಐಸ್ ಕ್ಯೂಬನ್ನು ತೆಗೆದುಕೊಂಡು ತಿಕ್ಕಿ. ನೇರವಾಗಿ ಸಾಧ್ಯವಾಗದಿದ್ದರೆ ಬಟ್ಟೆಯಲ್ಲಿ ಐಸ್ ತುಂಡನ್ನು ಕಟ್ಟಿ. ಅದನ್ನು ಕೆಂಪಾದ ಜಾಗಕ್ಕೆ ರಬ್ ಮಾಡಿ.

ಅಲೋವೆರಾ ದಲ್ಲಿ ಆಂಟಿ-ಬ್ಯಾಕ್ಟಿರಿಯಾ ಗುಣವಿದೆ. ಸೊಳ್ಳೆ ಕಡಿದ ನಂತರ ಕಾಣಿಸಿಕೊಳ್ಳುವ ತುರಿಕೆ ಉರಿ ಹಾಗೂ ನೋವಿಗೆ ಪರಿಹಾರ ನೀಡುತ್ತದೆ. ಅಲೋವೆರಾ ಎಲೆಯಲ್ಲಿ ಸ್ವಚ್ಛವಾಗಿ ತೊಳೆದು ಅದರ ಜಿಲ್ಲಾ ಹೊರತೆಗೆಯಿರಿ. ಇದೆಲ್ಲ ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿದರೆ ಗಾಯವೂ ಗುಳ್ಳೆಯೂ ಮಾಯವಾಗುತ್ತದೆ.

ನಿಂಬೆರಸ ದಿಂದಲೂ ಸೊಳ್ಳೆ ಕಚ್ಚಿದ ಗಾಯವನ್ನು ದೂರ ಮಾಡಬಹುದು. ಲಿಂಬೆರಸ ದಲ್ಲಿರುವ ಆಂಟಿಸೆಪ್ಟಿಕ್ ಗುಣ ಅಲರ್ಜಿಯಂತ ಸಮಸ್ಯೆಯನ್ನು ದೂರಮಾಡುತ್ತದೆ. ಸೊಳ್ಳೆ ಕಚ್ಚಿದ ಈ ಜಾಗಕ್ಕೆ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಹಚ್ಚಿದರೆ ಉರಿ ಹಾಗೂ ತುರಿಕೆ ಕಡಿಮೆಯಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button