ಆರೋಗ್ಯಲೈಫ್ ಸ್ಟೈಲ್

ಉತ್ತಮ ನಿದ್ದೆಗೆ ಇದೇ ಮನೆ ಮದ್ದು!

ಪವಿತ್ರಾ ಶೆಟ್ಟಿ

ಗಡದ್ದಾಗಿ ನಿದ್ದೆ ಮಾಡಬೇಕು ಎಂದುಕೊಂಡಿದ್ದೀರಾ. ಆದರೆ ಅದು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ಕೇಳಿ.

ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ಬೆಳಗ್ಗೆ ಫ್ರೆಶ್ ಆಗಿ ಏಳುವುದು ಕಷ್ಟವಾಗುತ್ತದೆ. ದಿನವಿಡೀ ನಿಮ್ಮ ಮೂಡ್ ಕೂಡ ಹಾಳಾಗುತ್ತದೆ. ಅದನ್ನು ತಪ್ಪಿಸಿ ಉತ್ತಮ ನಿದ್ದೆ ಪಡೆಯಲು ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ. ಅದಕ್ಕೆ ಚಿಟಿಕೆ ಅರಿಶಿನಪುಡಿ ಬೆರೆಸಿದರೆ ಜೀರ್ಣ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತದೆ.

ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿದ ಎರಡು ಬಾದಾಮಿಯನ್ನು ತಿನ್ನುವುದು ಕೂಡ ಉತ್ತಮ ನಿದ್ದೆಗೆ ಸಹಾಯವಾಗುತ್ತದೆ. ರಾತ್ರಿವೇಳೆ ಚಹಾ ಕುಡಿಯುವುದನ್ನು ತಪ್ಪಿಸಿ. ಇದು ನಿಮ್ಮ ನಿದ್ದೆಯನ್ನು ಕಸಿಯಬಹುದು.

ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಇದು ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಆದರೆ ಅಸ್ತಮಾ ಅಥವಾ ಶೀತ ಕೆಮ್ಮು ಸಮಸ್ಯೆಯಿಂದ ಬಳಲುವವರು ಬಾಳೆಹಣ್ಣಿನಿಂದ ದೂರವಿರುವುದು ಒಳ್ಳೆಯದು.

ಪ್ರತಿದಿನ ಆರರಿಂದ ಎಂಟು ಗಂಟೆ ಕಾಲ ನಿದ್ರಿಸಿದರೆ ಮಾತ್ರ ಒತ್ತಡಮುಕ್ತ ಜೀವನವನ್ನು ನೀವು ಆನಂದಿಸಬಹುದು. ಹಾಗಾಗಿ ಮೊಬೈಲ್, ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ದೂರವಿಟ್ಟು ಆರಾಮವಾಗಿ ಮಲಗಿ ನಿದ್ದೆ ಮಾಡಿ.

Spread the love

Related Articles

Leave a Reply

Your email address will not be published. Required fields are marked *

Back to top button