ರಕ್ತದೊತ್ತಡ ದೂರ ಮಾಡುವ ಬೆಳ್ಳುಳ್ಳಿ

ಪವಿತ್ರಾ ಶೆಟ್ಟಿ
ಬೆಳ್ಳುಳ್ಳಿ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಇದರಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಎರಡು ಕಾಳು ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೈ ಬಿಪಿ ಸಮಸ್ಯೆ ಇರುವವರು ನಿತ್ಯ ಈ ಕ್ರಮವನ್ನು ಅನುಸರಿಸಿ ಕೊಂಡುಬರುವುದು ಒಳ್ಳೆಯದು.
ಬೆಳ್ಳುಳ್ಳಿ ಕ್ಯಾನ್ಸರ್, ಸಂಧಿವಾತದಂತಹ ಮಾರಣಾಂತಿಕ ರೋಗಗಳನ್ನು ದೂರವಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಸೇವಿಸಲಾಗುತ್ತದೆ. ಇದರಿಂದ ವೈರಸ್ ಸಂಬಂಧಿ ರೋಗಗಳು ಬರದಂತೆಯು ನೀವು ಸ್ಟ್ರಾಂಗ್ ಆಗಬಹುದು.
ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಇದು ಹೃದಯಾಘಾತವಾಗುವ ಸಂಭವವನ್ನು ಕಡಿಮೆಮಾಡುತ್ತದೆ. ಹಾಗಿದ್ದರೆ ಯೋಚನೆ ಬಿಡಿ, ನಿತ್ಯ ಎರಡು ಕಾಳು ಬೆಳ್ಳುಳ್ಳಿ ಎಸಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.




