ಆರೋಗ್ಯಆಹಾರಲೈಫ್ ಸ್ಟೈಲ್

ತೂಕ ಇಳಿಸಿಕೊಳ್ಳಲು ಈ ಪಾನೀಯವನ್ನು ಸೇವಿಸಿ

– ಪವಿತ್ರಾ 

ತೂಕ ಹೆಚ್ಚಿಸಿಕೊಳ್ಳಲು ಯಾರು ಇಷ್ಟಪಡುವುದಿಲ್ಲ. ಹುಡುಗಿಯರು ತಮ್ಮ ತೂಕದ ಬಗ್ಗೆ ಹೆಚ್ಚು ಗಮನಕೊಡುತ್ತಾರೆ. ತಮ್ಮ ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಪಾನೀಯಗಳನ್ನು ಸೇವಿಸುತ್ತಾರೆ. ವ್ಯಾಯಾಮಗಳನ್ನು ಮಾಡುತ್ತಾರೆ. ಹಾಗಾಗಿ ಅಂಥವರು ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಈ ಪಾನೀಯವನ್ನು ಸೇವಿಸಿ.

ಹೊಟ್ಟೆಯ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಬಿಲ್ವ ಹಣ್ಣಿನ ಪೌಡರ್ ಅನ್ನು ಬಳಸಿ. ಅದು ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಇದು ಸಹಕಾರಿಯಾಗಿದೆ.

ನೀರು 5 ಕಪ್, ಬಿಲ್ವ ಹಣ್ಣಿನ ಪುಡಿ ½ ಚಮಚ, ಜೀರಿಗೆ ಪುಡಿ ½ ಚಮಚ, ಅರಿಶಿನ ಪುಡಿ 1 ಚಮಚ ಇವಿಷ್ಟನ್ನು ತೆಗೆದುಕೊಂಡು ನೀರಿಗೆ ಎಲ್ಲಾ ಪುಡಿಗಳನ್ನು ಮಿಕ್ಸ್ ಮಾಡಿ ಈ ನೀರನ್ನು ದಿನವಿಡೀ ಸ್ವಲ್ಪ ಸ್ವಲ್ಪವೇ ಕುಡಿಯಿರಿ.

ಈ ಪಾನೀಯದಲ್ಲಿ ನೀವು ಹೆಚ್ಚು ಹೆಚ್ಚು ಹಣ್ಣುಗಳನ್ನು ಮತ್ತು ಫೈಬರ್ ಭರಿತ ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು. ಇದು ದೇಹದಿಂದ ಎಲ್ಲಾ ಜೀವಾಣುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ತಿಂಗಳೊಳಗೆ ಕಡಿಮೆ ಮಾಡಿ ದೇಹ ಸ್ಲಿಮ್ ಆಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button