ಆಹಾರಲೈಫ್ ಸ್ಟೈಲ್

ಹಯಗ್ರೀವಾ

ಬೇಕಾಗುವ ಸಾಮಾಗ್ರಿಗಳು
ಕಡಲೆ ಬೇಳೆ – 1 ಬಟ್ಟಲು
ನೀರು- 3 ಬಟ್ಟಲು
ಬೆಲ್ಲ – 1 ಬಟ್ಟಲು
ಲವಂಗ- 4
ತುಪ್ಪ- 2 ಚಮಚ
ಗೋಡಂಬಿ – 10
ದ್ರಾಕ್ಷಿ – ಸ್ವಲ್ಪ
ಏಲಕ್ಕಿ ಪುಡಿ – ಸ್ವಲ್ಪ
ತೆಂಗಿನ ತುರಿ- ಅರ್ಧ ಬಟ್ಟಲು
ಮಾಡುವ ವಿಧಾನ: ಮೊದಲಿಗೆ ಪ್ರೆಶರ್ ಕುಕ್ಕರ್ ನಲ್ಲಿ ಕಡಲೆ ಬೇಳೆಗೆ 3 ಕಪ್ ನೀರು ಹಾಕಿ 5 ವಿಶಲ್ ಬರುವವರೆಗೂ ಬೇಯಿಸಿಕೊಳ್ಳಿ. ನಂತರ ನೀರನ್ನು ಬಸಿದುಕೊಳ್ಳಿ. ಬೇಯಿಸಿದ ಕಡ್ಲೆ ಬೇಳೆಯನ್ನು ದೊಡ್ಡ ಪಾತ್ರೆಗೆ ಹಾಕಿಕೊಂಡು ಅದಕ್ಕೆ ಬೆಲ್ಲ, ಲವಂಗ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ತನಕ ಮಿಶ್ರಣ ಮಾಡಿ, ಬೆಲ್ಲ ಕರಗಿ ದಪ್ಪವಾಗಲು ಪ್ರಾರಂಭವಾಗುವವರೆಗೆ ಕೈಯಾಡಿಸುತ್ತಲೇ ಇರಿ. ಮತ್ತೊಂದು ಬಾಣಲೆಗೆ 2 ಚಮಚ ತುಪ್ಪ, ಗೋಡಂಬಿ, ಒಣದ್ರಾಕ್ಷಿ ಹಾಕಿ ಕೆಂಪಗೆ ಹುರಿದಿಟ್ಟುಕೊಳ್ಳಿ. ಇದಕ್ಕೆ ಬೇಯಿಸಿಕೊಂಡಿರುವ ಕಡ್ಲೆ ಬೇಳೆ ಹಾಗೂ ಬೆಲ್ಲದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ತೆಂಗಿನಕಾಯಿ ಸೇರಿಸಿದರೆ ರುಚಿಕರವಾದ ಹಯಗ್ರೀವಾ ಸವಿಯಲು ಸಿದ್ದ.

Related Articles

Leave a Reply

Your email address will not be published. Required fields are marked *

Back to top button