24 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ!

ಮುಂಬೈ: ಅದು ಸಣ್ಣ ಪುಟ್ಟ ಮಟ್ಟದ ಡ್ರಗ್ಸ್ ಡೀಲ್ ಅಲ್ಲ. ಬರೋಬ್ಬರಿ 3.98 ಕೆಜಿ ಇದ್ದ ಹೆರಾಯಿನ್ ಡ್ರಗ್. ದಕ್ಷಿಣ ಆಫ್ರಿಕಾದಿಂದ ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಕಸ್ಟಮ್ಸ್ ಕಣ್ಣು ತಪ್ಪಿಸಿ ಹೆರಾಯಿನ್ ಸ್ಮಗಲ್ ಮಾಡೋಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದ್ರೆ ಮಾದಕವಸ್ತು ಪತ್ತೆ ವಿಭಾಗದ ಪೊಲೀಸರಿಗೆ ಮಾಹಿತಿ ಲೀಕ್ ಆಗಿತ್ತು.
ಅದ್ರಂತೆ ಏರ್ ಪೋರ್ಟ್ಗೆ ಎಂಟ್ರಿ ಕೊಟ್ಟ ಪೊಲೀಸ್ರು ಜೋಹನ್ಸ್ ಬರ್ಗ್ ನಿಂದ ಕೆಂಪು ಟ್ರಾಲಿ ಬ್ಯಾಗೊಂದನ್ನ ಎಳೆದುಕೊಂಡು ಬರುತ್ತಿದ್ದವನನ್ನ ಸೆರೆ ಹಿಡಿದರು. ಆ ಬ್ಯಾಗನ್ನ ಪರಿಶೀಲನೆಗೆ ಒಳಪಡಿಸಲಾಯ್ತು. ಬ್ಯಾಗಿನಲ್ಲಿ ಸುಮಾರು 4 ಪಾಕೇಟ್ ಗಳ ಹೆರಾಯಿನ್ ಕಂಡು ಬಂತು. ಬರೋಬ್ಬರಿ 3.98 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಯ್ತು. ಇದರ ಬೆಲೆ ಏನಿಲ್ಲವೆಂದರು 24ಕೋಟಿ ರೂಪಾಯಿ
ಈ ಹಿಂದೆ ಕೂಡ ಅಂದ್ರೆ 2021ರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದ ಮಹಿಳೆಯೊಬ್ಬಳನ್ನ ಬಂಧಿಸಿ ಆಕೆಯಿಂದ ಸುಮಾರು 3.9 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಅವತ್ತಿಗೆ ಆ ಡ್ರಗ್ಸ್ ಮೌಲ್ಯ 21 ಕೋಟಿ ಇತ್ತು ಎಂದು ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ
