ಆಹಾರಲೈಫ್ ಸ್ಟೈಲ್
ಬೆಳಗಿನ ಬ್ರೇಕ್ ಫಾಸ್ಟ್ ಗೆ ಹುಳಿಯನ್ನ: ರೆಡಿ ಮಾಡಿ ರುಚಿ ನೋಡಿ

ಬೇಕಾಗುವ ಸಾಮಾಗ್ರಿಗಳು
ಕಾಯಿತುರಿ- 1 ಕಪ್
ಜೀರಿಗೆ- 3 ಸ್ಪೂನ್
ಒಣಮೆಣಸಿನಕಾಯಿ- 7
ಬ್ಯಾಡಗಿ ಮೆಣಸಿನಕಾಯಿ- 5
ಉಪ್ಪು- ರುಚಿಗೆ ತಕ್ಕಷ್ಟು
ಹುಣಸೆಹಣ್ಣು- ಒಂದು ನಿಂಬೆಹಣ್ಣಿನ ಗಾತ್ರ
ಅರಿಶಿಣ ಪುಡಿ- ¼ ಟಿ ಸ್ಪೂನ್
ಬೆಳ್ಳುಳ್ಳಿ- 1 ಗಡ್ಡೆ
ಬೇಕಾದಷ್ಟು ಎಣ್ಣೆ
ಅಕ್ಕಿ- 2 ಗ್ಲಾಸ್
ನೀರು- 4 ಗ್ಲಾಸ್
ಮಾಡುವ ವಿಧಾನ: ಮೊದಲಿಗೆ ಮಿಕ್ಸಿ ಜಾರ್ ಗೆ ಕಾಯಿತುರಿ, ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ, ಒಣಮೆಣಸಿನ ಕಾಯಿ, ಉಪ್ಪು, ಹುಣಸೆಹಣ್ಣು ಹಾಗೂ ಜೀರಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
ನಂತರ ಕುಕ್ಕರ್ ಗೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ. ಫ್ರೈ ಆದ ಬಳಿಕ ರುಬ್ಬಿಕೊಂಡಿರುವ ಮಿಶ್ರಣ ಹಾಕಿ ನಂತರ ನೀರು ಸೇರಿಸಿ. ನೀರು ಕಾದ ಬಳಿಕ ತೊಳೆದುಕೊಂಡಿರುವ ಅಕ್ಕಿ ಹಾಕಿ ಒಂದು ವಿಷಲ್ ಕೂಗುವ ತನಕ ಬಿಡಿ. ಪ್ರೆಷರ್ ಹೋದ ಬಳಿಕ ಬಿಸಿ ಬಿಸಿಯಾದ ಹುಳಿಯನ್ನ ಸವಿಯಲು ಸಿದ್ದ.




