Breaking NewsLatestಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿ

ಬಿಯರ್ ಕೇಳಿದ ವ್ಯಕ್ತಿಗೆ ಫನ್ನಿಯಾಗಿ ಉತ್ತರಿಸಿದ ಸೋನು ಸೂದ್

ನಟ ಸೋನು ಸೂದ್ ರೀಲ್ ಜೊತೆಗೆ ರಿಯಲ್ ಹೀರೋ ಕೂಡ ಹೌದು. ಸೋನು ಸೂದ್ ರ ರಿಯಲ್ ಲೈಫ್ ವ್ಯಕ್ತಿತ್ವಕ್ಕೆ ಸಾಕಷ್ಟು ಮಂದಿ ಅವರನ್ನು ಇಷ್ಟಪಡುತ್ತಾರೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ನೆರವಾಗಿ ರಿಯಲ್ ಹೀರೋ ಅನಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸೋನು ಸೂದ್ ಬಳಿ ವ್ಯಕ್ತಿಯೊಬ್ಬ ಬಿಯರ್ ಕೇಳಿದ್ದು ಅದಕ್ಕೆ ಸೋನು ಸೂದ್ ಉತ್ತರಿಸಿದ ರೀತಿ ಸಖತ್ ವೈರಲ್ ಆಗಿದೆ.

ಸೋನು ಸೂದ್ ಅವರಿಗೆ ಸಂಬಂಧಿಸಿದಂತೆ ಅನೇಕ ಮೀಮ್ಸ್ ಹರಿದಾಡುತ್ತಿವೆ. ಆ ಪೈಕಿ ಒಂದು ಮೀಮ್ ಬಹಳ ಗಮನ ಸೆಳೆದಿದೆ. ‘ಚಳಿಗಾಲದಲ್ಲಿ ಕಂಬಳಿ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್ ದಾನ ಮಾಡುವುದಿಲ್ಲವೇ’ ಎಂದು ಬರೆದಿರುವ ಮೀಮ್ ಅನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಸೋನು ಸೂದ್ ಸಖತ್ ಫನ್ನಿಯಾಗಿ ಉತ್ತರಿಸಿದ್ದಾರೆ. ‘ಬಿಯರ್ ಜೊತೆ ತಿನ್ನಲು ಖಾರ ನೀಡಿದರೆ ನಡೆಯುತ್ತಾ’ ಎಂದು ಅವರು ಫನ್ನಿಯಾಗಿ ಪ್ರಶ್ನಿಸಿದ್ದಾರೆ. ‘ಖಾರ ಪಡೆಯಲು ಬಿಯರ್ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ಹೆಚ್ಚಾಗಿ ವಿಲನ್ ರೋಲ್ ಮೂಲಕ ಫೇಮಸ್ ಆದ ಸೋನು ಸೂದ್ ಅಭಿಮಾನಿಗಳ ಪಾಲಿನ ರಿಯಲ್ ಹೀರೋ. ಕೋವಿಡ್ ಬಳಿಕ ಸೋನು ಸೂದ್ ರ ರಿಯಲ್ ಪರ್ಸನಾಲಿಟಿ ಕಾಣಿಸಿದೆ. ಸದ್ಯ ಸೋನು ಸೂದ್ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಎಂಟಿವಿ ರೋಡೀಸ್ ಕಾರ್ಯಕ್ರಮದ ನಿರೂಪಣೆಯನ್ನು  ಮಾಡುತ್ತಿದ್ದಾರೆ. ಏ.8ರಿಂದ ಕಾರ್ಯಕ್ರಮ ಪ್ರಸಾರ ಆಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button