ಆರೋಗ್ಯಆಹಾರಲೈಫ್ ಸ್ಟೈಲ್

ಈರುಳ್ಳಿ ಕತ್ತರಿಸಿ ಇಡದಿರಿ

ಪವಿತ್ರಾ ಶೆಟ್ಟಿ

ಈರುಳ್ಳಿಯನ್ನು ಕತ್ತರಿಸಿದ ಬಳಿಕ ಅದನ್ನು ಫ್ರಿಜ್ ನಲ್ಲಿ ಇಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ಏನೆಂದು ನಿಮಗೆ ಗೊತ್ತೇ?

ಈರುಳ್ಳಿಯನ್ನು ಕತ್ತರಿಸಿದ ಬಳಿಕ ಅದರಿಂದ ಹೊರಹೊಮ್ಮುವ ಗಾಢವಾದ ವಾಸನೆ ಫ್ರಿಜ್ ಅನ್ನು ತುಂಬಬಹುದು. ಇದು ಫ್ರಿಜ್ ನಲ್ಲಿಟ್ಟ ಇತರ ತಿನಿಸುಗಳನ್ನು ಹಾಳು ಮಾಡಬಹುದು. ಎಲ್ಲ ತಿನಿಸುಗಳಿಗೂ ಈರುಳ್ಳಿಯ ವಾಸನೆಯೇ ಅಂಟಿಕೊಳ್ಳಬಹುದು.

ಸಿಪ್ಪೆ ಸುಲಿದ ಅಥವಾ ಕತ್ತರಿಸಿದ ಈರುಳ್ಳಿಯನ್ನು ಇಟ್ಟರೆ ಅದು ಸುತ್ತಮುತ್ತಲಿನ ಬ್ಯಾಕ್ಟೀರಿಯಾ ಹಾಗೂ ರೋಗಕಾರಕ ಅಂಶಗಳನ್ನು ಬಹುಬೇಗ ಸೆಳೆದುಕೊಳ್ಳುತ್ತದೆ. ಇದು ರೋಗಕಾರಕಗಳ ಸಂತಾನೋತ್ಪತ್ತಿಗೂ ಕಾರಣವಾಗಬಹುದು.

ಅಲ್ಲಿಂದ ಹೊರತೆಗೆದು ನೇರವಾಗಿ ಸೇವಿಸುವುದರಿಂದ ಹಲವು ಹಾನಿಕಾರಕ ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆ ಸೇರಬಹುದು. ಇದರೊಂದಿಗೆ ನೀರುಳ್ಳಿಯ ಪೋಷಕಾಂಶಗಳು ನಿಮಗೆ ಲಭ್ಯವಾಗದೆ ಹೋಗಬಹುದು. ಈರುಳ್ಳಿಯನ್ನು ಕತ್ತರಿಸಿದ ತಕ್ಷಣ ಬಳಸುವುದೇ ಇದಕ್ಕಿರುವ ಸರಿಯಾದ ಮಾರ್ಗ. ಯಾವುದೇ ಕಾರಣಕ್ಕೆ ಸಿಪ್ಪೆ ತೆಗೆದ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಸಂಗ್ರಹಿಸಿಡದಿರಿ

Spread the love

Related Articles

Leave a Reply

Your email address will not be published. Required fields are marked *

Back to top button