ಆಹಾರಲೈಫ್ ಸ್ಟೈಲ್

ಕಡಲೆಹಿಟ್ಟು ಕಲಬೆರಕೆಯೇ?

ಪವಿತ್ರಾ ಶೆಟ್ಟಿ

ಬಜ್ಜಿ ಬೋಂಡಾ ತಯಾರಿಕೆಗೆ ಮಾತ್ರವಲ್ಲ, ಸೌಂದರ್ಯ ವರ್ಧಕವಾಗಿಯೂ ಬಳಕೆಯಾಗುವ ಕಡಲೆ ಹಿಟ್ಟು ಅಸಲಿಯೋ ಕಲಬೆರಕೆಯೋ ಎಂದು ತಿಳಿಯುವುದು ಹೇಗೆ?

ಕಡಲೆ ಹಿಟ್ಟಿನೊಂದಿಗೆ ರವೆ, ಬಟಾಣಿ, ಅಕ್ಕಿ ಪುಡಿ, ಮೆಕ್ಕೆ ಜೋಳ ಮತ್ತು ಕೃತಕ ಬಣ್ಣಗಳನ್ನು ಸೇರಿಸಲಾಗುತ್ತದೆ. ಕೆಲವೊಮ್ಮೆ ಇದಕ್ಕೆ ಗೋಧಿ ಹಿಟ್ಟನ್ನೂ ಸೇರಿಸಲಾಗುತ್ತದೆ.
ಇದರ ಅಸಲಿಯತ್ತನ್ನು ಪರೀಕ್ಷಿಸಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಿಕೊಳ್ಳಿ. ಎರಡು ಚಮಚ ಕಡಲೆ ಹಿಟ್ಟಿಗೆ ಎರಡು ಚಮಚ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಹೈಡ್ರೋಕ್ಲೋರಿಕ್ ಆಮ್ಲ ಬೆರೆಸಿ ಐದು ನಿಮಿಷ ಬಿಡಿ. ಆಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ತಿಳಿಯಿರಿ.

ನಿಂಬೆಯ ಸಹಾಯದಿಂದಲೂ ನೀವು ಇದನ್ನು ಪರೀಕ್ಷಿಸಬಹುದು. ಮೊದಲು ಇದಕ್ಕೆ ಎರಡು ಚಮಚ ನಿಂಬೆರಸ ಬೆರಸಿ. ಬಳಿಕ ಅಷ್ಟೇ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಸ್ವಲ್ಪ ಸಮಯದ ಬಳಿಕ ಅದು ಕಂದು ಬಣ್ಣಕ್ಕೆ ತಿರುಗಿದ್ದರೆ ಅದರಲ್ಲಿ ಕಲಬೆರಕೆ ಆಗಿದೆ ಎಂದರ್ಥ. ಹಾಗಾಗಿ ಕಡಲೆ ಹಿಟ್ಟನ್ನು ಬಳಸುವ ಮುನ್ನ ಅದರ ಗುಣಮಟ್ಟವನ್ನು ಪರೀಕ್ಷಿಸಲು ಮರೆಯದಿರಿ.

Spread the love

Related Articles

Leave a Reply

Your email address will not be published. Required fields are marked *

Back to top button