ಹೋಟೆಲ್ ಸ್ಟೈಲ್ ನಲ್ಲಿ ಇಡ್ಲಿ- ಸಾಂಬರ್ ಮಾಡುವ ವಿಧಾನ

ಸಾಮಾನ್ಯವಾಗಿ ಮನೆ ಅಡುಗೆ ತಿನ್ನದು ಬೇಸರವಾಗಿರುತ್ತದೆ. ಆಗಾ ಹೋಟೆಲ್ ಗೆ ಹೋಗುತ್ತಾರೆ. ಅಲ್ಲಿನ ತಿಂಡಿ ನಾಲಿಗೆ ರುಚಿಕರವಾಗಿರುತ್ತದೆ. ಹೀಗಾಗಿ ಕೆಲ ತಿಂಡಿಗಳನ್ನು ಹೋಟೆಲ್ ಸ್ಟೈಲ್ ನಲ್ಲಿ ಒಮ್ಮೆ ತಯಾರು ಮಾಡುವುದಕ್ಕೆ ಮುಂದಾಗುತ್ತಾರೆ. ಅದರಲ್ಲೂ ಇಡ್ಲಿ ಮತ್ತು ಸಾಂಬರ್ ಅಂದರೆ ಸಾಕು ಎಲ್ಲರಿಗೂ ಇಷ್ಟ. ಕೆಲವೇ ನಿಮಿಷದಲ್ಲಿ ಹೋಟೆಲ್ ಸ್ಟೈಲ್ ನಲ್ಲಿ ಇಡ್ಲಿ ಮತ್ತು ಸಾಂಬರ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ಹಸಿರು ಮೆಣಸಿನಕಾಯಿ 4
ಟೊಮ್ಯಾಟೋ 3
ಸಾಸಿವೆ 1ಚಮಚ
ಕೊತ್ತಂಬರಿ- ಸ್ವಲ್ಪ
ಒಣ ಮೆಣಸಿನಕಾಯಿ- 2
ಕರಿಬೇವು- ಸ್ವಲ್ಪ
ಜೀರಿಗೆ 1 ಚಮಚ
ಮೆಂತ್ಯ ಅರ್ಧ ಚಮಚ
ಈರುಳ್ಳಿ 2
ಹುಣಸೆ ಹಣ್ಣು- ಸ್ವಲ್ಪ
ತರಕಾರಿಗಳು -ನಿಮ್ಮ ಆಯ್ಕೆ
ಅರಿಶಿಣ ಪುಡಿ ಸ್ವಲ್ಪ
ಮೆಣಸಿನ ಪುಡಿ 1 ಚಮಚ
ಅಡುಗೆ ಎಣ್ಣೆ 1 ಚಮಚ
ಸಾಂಬಾರ್ ಪುಡಿ 2 ಚಮಚ
ತೊಗರಿ ಬೇಳೆ 1 ಚಮಚ
ಮಾಡುವ ವಿಧಾನ:
ಮೊದಲು ಕುಕ್ಕರ್ ಗೆ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಮೆಂತ್ಯ, . ಈರುಳ್ಳಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಟೊಮ್ಯಾಟೋ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಲು ಬಿಡಿ.ಟೊಮ್ಯಾಟೋ ಮೃದುವಾದ ನಂತರ, ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ. ತರಕಾರಿಗಳು ಅರ್ಧ ಬೆಂದ ನಂತರದಲ್ಲಿ ಮೆಣಸಿನ ಪುಡಿ, ಅರಿಶಿಣ ಪುಡಿ, ಸಾಂಬಾರ್ ಪುಡಿ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ ಸ್ವಲ್ಪ ಸಮಯ ಬೇಯಲು ಬಿಟ್ಟಿರಬೇಕು. ನಂತರ ತೊಗರಿ ಬೇಳೆ ಸೇರಿಸಿ. ನೀರು, ಹುಣಸೆ ಹಣ್ಣಿನ ಹುಳಿ ಸೇರಿಸಿ 4 ಸೀಟಿ ಬರುವವರೆಗೆ ಬೇಯಿಸಿ.ತಣ್ಣಗಾದ ನಂತರ ಬೆಳೆಯನ್ನು ತರಕಾರಿಗಳಿಗೆ ಹಾಕಿ ಸ್ವಲ್ಪ ಸ್ಮಾಷ್ ಮಾಡಿ. ಬಳಿಕ ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸಿನ ಕಾಯಿ ಒಗ್ಗರಣೆ ಹಾಕಿದರೆ ಸಾಂಬಾರ್ ಸವಿಯಲು ರೆಡಿ.




