ಫ್ಯಾಷನ್ಮನರಂಜನೆಲೈಫ್ ಸ್ಟೈಲ್ಸೆಲೆಬ್ರಿಟಿಸೌಂದರ್ಯ

ಲಕ್ಷ ಮೌಲ್ಯದ ಡ್ರೆಸ್ ಧರಿಸಿದ ಕರಿಷ್ಮಾ ಕಪೂರ್

90ರ ದಶಕದ ಸ್ಟೈಲಿಶ್ ನಟಿಯರಲ್ಲಿ ಕರಿಷ್ಮಾ ಕಪೂರ್ ಕೂಡ ಒಬ್ಬರು. ಅವರ ಸೌಂದರ್ಯ ಮತ್ತು ಉಡುಪುಗಳು ಹೆಚ್ಚಿನವರನ್ನು ಮಂತ್ರಮುಗ್ಧಗೊಳಿಸುತ್ತದೆ. ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ಶನಿವಾರ ನಡೆದ ಇಂಡಿಯನ್ ಐಡಲ್ 12ರ ಸೆಟ್ ಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿ ಕರಿಷ್ಮಾ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅವರು ಕೆಂಪು ಬಣ್ಣದ ಶರಾರಾ ಸೆಟ್ ಅನ್ನು ಧರಿಸಿದ್ದರು. ಉಡುಪಿನ ಜೊತೆಗೆ ಕೆಂಪು ಬಣ್ಣಂದ ಲಿಪ್ ಸ್ಟಿಕ್, ಕಣ್ಣುಗಳಗೆ ದಪ್ಪ ಮೇಕಪ್ ಮಾಡಿಕೊಂಡಿದ್ದಾರೆ. ಹಾಗೇ ವಜ್ರ ಹೊದಿಕೆಯ ಕಿವಿಯೋಲೆಗಳನ್ನು ಧರಿಸಿದ್ದಾರೆ.

ಈ ಉಡುಪನ್ನು ಫ್ಯಾಷನ್ ಡಿಸೈನರ್ ರಿತಿಕಾ ಮಿರ್ಚಂದಾನಿ ವಿನ್ಯಾಸ ಮಾಡಿದ್ದು, ಅದರ ಬೆಲೆ 1,09,000 ರೂ. ಇದು ಫ್ಯಾಬ್ರಿಕ್ ಕ್ರೆಪ್ ರೇಷ್ಮೆ ಮತ್ತು ಮಣಿ, ದಾರ, ರೇಷಮ್ ಮತ್ತು ಬಗಲ್ ಕಸೂತಿಯನ್ನು ಹೊಂದಿದೆ. ಈ ಡ್ರೆಸ್ ನಲ್ಲಿ ಕರಿಷ್ಮಾ ಸುಂದರವಾಗಿ ಕಾಣಿಸುತ್ತಿದ್ದರು.

Related Articles

Leave a Reply

Your email address will not be published. Required fields are marked *

Back to top button