ಬೆಳಗಾವಿ

ಬೆಳಗಾವಿಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ

ಬೆಳಗಾವಿ: ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿ ಅನ್ವಯ ಪರೀಕ್ಷೆ ಪ್ರಾರಂಭಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಸಿಸುತ್ತಿದ್ದಂತೆ ಸ್ಯಾನಿಟೈಸರ್ ಮಾಡಿ ಪ್ರವೇಶ ನೀಡಲಾಗಿದೆ.‌ ಸರ್ದಾರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ಬೆಳಗಾವಿ ಶೈಕ್ಷಣಿಕ ವಲಯದಲ್ಲಿ SSLC ಪರೀಕ್ಷೆ ಬರೆಯುತ್ತಿರುವ 35,308 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 194 ಪರೀಕ್ಷಾ ಕೇಂದ್ರಗಳಲ್ಲಿ 35,308 ವಿಧ್ಯಾರ್ಥಿಗಳು, 19134 ಬಾಲಕರು ಹಾಗೂ 16174 ಬಾಲಕಿಯರು ಎಸ್ ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಬೆಳಗಾವಿ ನಗರ 10302, ಬೆಳಗಾವಿ ಗ್ರಾಮೀಣ 5758, ಬೈಲಹೊಂಗಲ 4358, ಖಾನಾಪೂರ 4169, ರಾಮದುರ್ಗ 3796, ಸವದತ್ತಿ 4874, ಚನ್ನಮ್ಮನ ಕಿತ್ತೂರು 2051 SSLC ಪರೀಕ್ಷೆ ಬರೆಯುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button